ತನ್ನ ಲೈಂಗಿಕ ವಾಂಛೆ ಭರ್ತಿ ಮಾಡಿಕೊಳ್ಳಲು ಮಗುವನ್ನು  ತನ್ನದೇ ಪೊಲೀಸ್ ಕಾರಿನಲ್ಲಿ ಬಿಟ್ಟು ಹೋಗಿದ್ದ ಮಾಜಿ ಅಧಿಕಾರಿಯೊಬ್ಬರಿಗೆ ಶಿಕ್ಷೆಗೆ ಗುರಿಯಾಗಿದ್ದು ಶಿಕ್ಷೆ ಅಧಿಕೃತವಾಗಿ ಪ್ರಕಟ ಮಾಡಬೇಕಿದೆ.

ವಾಷಿಂಗ್ ಟನ್(ಮಾ. 21)  ತಾಯಿಯ ಕ್ಷಣಿಕ ಆಸೆಗೆ ಮೂರು ವರ್ಷದ ಮಗು ಬಲಿಯಾಗಿದೆ. ಪ್ರಿಯತಮನೊಂದಿಗೆ ಬಯಕೆ ತೀರಿಸಿಕೊಳ್ಳಲು ಹೋದ ತಾಯಿ ಹಿಂದಕ್ಕೆ ಬಂದು ನೋಡಿದಾಗ ಮಗು ಸಾವಿನ ಕದ ತಟ್ಟಿತ್ತು.

Add Asianetnews Kannada as a Preferred SourcegooglePreferred

ಕಾಸಿಲ್ ಬಾರ್ಕರ್ ಎಂಬ ಮಾಜಿ ಪೊಲೀಸ್ ಅಧಿಕಾರಿ ಪ್ರಿಯತಮನೊಂದಿಗೆ ದಿನ ಕಳೆಯಲು 3 ವರ್ಷದ ಮಗುವನ್ನು ಕಾರಿನಲ್ಲಿಯೇ ಬಿಟ್ಟು ಹೋಗಿದ್ದರು. ಈ ವೇಳೆ ಕಾರಿನ ಗಾಜುಗಳನ್ನು ಸಂಪೂರ್ಣ ಕ್ಲೋಸ್ ಮಾಡಿದ್ದರು. ಸುಮಾರು 4 ಗಂಟೆ ನಂತರ ಹಿಂದಕ್ಕೆ ಬಂದಾಗ ಮಗುವಿನ ದೇಹದ ಉಷ್ಠಾಂಶ 107 ಡಿಗ್ರಿಗೆ ಏರಿಹೋಗಿತ್ತು. 

ಸೆಕ್ಸ್ ವೇಳೆ ಕಾಂಡೋಮ್ ಕಳಚಿದವನಿಗೆ ನ್ಯಾಯಾಲಯ ಕೊಟ್ಟ ಶಿಕ್ಷೆ ಏನು?

ಚಿಕಿತ್ಸೆ ಫಲಕಾರಿಯಾಗದೆ 2016ರಲ್ಲಿ ಮಗು ಚಾಯನ್ನೆ ಮೃತಪಟ್ಟಿತ್ತು. ಕಳೆದ ವರ್ಷವೇ ಈ ಪ್ರಕರಣ ನಡೆದಿದ್ದು ಅಧಿಕಾರಿಯನ್ನು ಬಂಧಿಸಿ ಸುದೀರ್ಘ ವಿಚಾರಣೆ ನಂತರ ಆರೋಪ ಸಾಬೀತಾಗಿದೆ. 20 ವರ್ಷದ ಕಠಿಣ ಶಿಕ್ಷೆ ನೀಡಬೇಕು ಎಂದು ವಾದ ಮುಂದಿಡಲಾಗಿದೆ.