ಲೈಂಗಿಕ ಕ್ರಿಯೆ ನಡೆಯುತ್ತಿದ್ದಾಗ ಗೆಳತಿಗೆ ಹೇಳದೆ ಧರಿಸಿದ್ದ ಕಾಂಡೋಮ್ ಹೊರತೆಗೆದ 36 ವರ್ಷದ ಪೊಲೀಸಪ್ಪನಿಗೆ 8 ತಿಂಗಳ ಕಾರಾಗೃಹ ಶಿಕ್ಷೆ ನೀಡಲಾಗಿದೆ.

ಗೆಳತಿಯೊಂದಿಗೆ ಕಳೆದ ನವೆಂಬರ್‌ನಲ್ಲಿ ಸೆಕ್ಸ್‌ ನಡೆಸುತ್ತಿದ್ದ ವೇಳೆ ಈ ಕೆಲಸ ಮಾಡಿದವನ ಮೇಲೆ ಗೆಳತಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾಳೆ. ಆದರೆ ಇದು ಒಪ್ಪಿಗೆಯ ಸೆಕ್ಸ್ ಎಂದು ಪರಿಭಾವಿಸಿದ ನ್ಯಾಯಾಲಯ 8 ತಿಂಗಳ ಕಾರಾಘೃಹ ಶಿಕ್ಷೆ ಮತ್ತು 3 ಸಾವಿರ ಯುರೋ ದಂಡ ಹಾಕಿದೆ.

ಸೆಕ್ಸ್ ವೇಳೆ ಸ್ಟೀಲ್ತಿಂಗ್ ಮಾಡುವ ಪ್ರವೃತ್ತಿ ಹುಡುಗರಲ್ಲಿ ಹೆಚ್ಚುತ್ತಿದೆಯಾ? ಏನಿದು ಸ್ಟೀಲ್ತಿಂಗ್?

ಜೋಡಿಗಳು ಕಾಂಡಮ್ ಧರಿಸಿ ಲೈಂಗಿಕ ‌ಕ್ರಿಯೆಯಲ್ಲಿ ತೊಡಗಿರುವಾಗ, ಆ ನಡುವೆ ಸಂಗಾತಿಗೆ ತಿಳಿಯದಂತೆ ಕಾಂಡೋಮನ್ನು ಕಳಚುವುದನ್ನು ಸ್ಟೀಲ್ತಿಂಗ್ ಅನ್ನುತ್ತಾರೆ. ಈ ಬಗ್ಗೆ ಕೊಲಂಬಿಯಾ ಜರ್ನಲ್ ಆಫ್ ಜಂಡರ್ ಅಂಡ್ ಲಾ ನಲ್ಲಿ ವಿಸ್ತೃತವಾಗಿ ಚರ್ಚಿಸಲಾಗಿದ್ದು, ಸಂಗಾತಿಯ ಅನುಮತಿಯಿಲ್ಲದೇ ಕಾಂಡೂಮ್ ಕಳಚುವ ಇಂತಹ ಪ್ರಕರಣಗಳು ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ನಿರ್ಲಕ್ಷಿಸಲ್ಪಡುತ್ತಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಹೆಚ್ಚು  ಗಂಭೀರವಾಗಿ ಚರ್ಚೆಯಾಗುವ ಅಗತ್ಯವಿದೆಯೆಂದು ತಜ್ಞರು ಅಭಿಪ್ರಾಯಪಡುತ್ತಾರೆ.