ಇರಾನ್‌ನ ಅಣು ಕೇಂದ್ರಗಳ ಮೇಲೆ ಅಮೆರಿಕ ದಾಳಿ ನಡೆಸಿದ ಬೆನ್ನಲ್ಲೇ ಇರಾನ್‌ ಕಡೆಯಿಂದ ಭಾರೀ ಪ್ರತಿದಾಳಿ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ, ಮಧ್ಯಪ್ರಾಚ್ಯ ದೇಶಗಳಲ್ಲಿರುವ ತನ್ನೆಲ್ಲಾ ಸೇನಾ ನೆಲೆಗಳ ಸುತ್ತ ತೆರವಿಗೆ ಅಮೆರಿಕ ಮುಂದಾಗಿದೆ.

ವಾಷಿಂಗ್ಟನ್‌: ಇರಾನ್‌ನ ಅಣು ಕೇಂದ್ರಗಳ ಮೇಲೆ ಅಮೆರಿಕ ದಾಳಿ ನಡೆಸಿದ ಬೆನ್ನಲ್ಲೇ ಇರಾನ್‌ ಕಡೆಯಿಂದ ಭಾರೀ ಪ್ರತಿದಾಳಿ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ, ಮಧ್ಯಪ್ರಾಚ್ಯ ದೇಶಗಳಲ್ಲಿರುವ ತನ್ನೆಲ್ಲಾ ಸೇನಾ ನೆಲೆಗಳ ಸುತ್ತ ತೆರವಿಗೆ ಅಮೆರಿಕ ಮುಂದಾಗಿದೆ.

Add Asianetnews Kannada as a Preferred SourcegooglePreferred

ಈಗಾಗಲೇ ಸಿರಿಯಾ, ಕತಾರ್‌, ಇರಾಕ್‌ನಲ್ಲಿರುವ ಅಮೆರಿಕ ಸೇನಾ ನೆಲೆಗಳ ಮೇಲೆ ಇರಾನ್‌ ದಾಳಿ ಮಾಡಿದೆ. ಇದರಿಂದ ಜಾಗೃತವಾಗಿರುವ ದೊಡ್ಡಣ್ಣ ಮುನ್ನೆಚ್ಚರಿಕಾ ಕ್ರಮವಾಗಿ, ಅನ್ಯ ಮಧ್ಯಪ್ರಾಚ್ಯ ರಾಷ್ಟ್ರಗಳಾದ ಬಹ್ರೈನ್‌, ಕುವೈತ್‌, ಯುಎಇ, ಸೌದಿ ಅರೇಬಿಯಾ, ಜೋರ್ಡನ್‌, ಈಜಿಪ್ಟ್‌ನಲ್ಲಿರುವ ತನ್ನೆಲ್ಲಾ ಸೇನಾ ನೆಲಗಳ ಸುತ್ತಲಿನ 1. ಕಿ.ಮೀ. ಪ್ರದೇಶವನ್ನು ತುರ್ತಾಗಿ ತೆರವು ಮಾಡುವಂತೆ ಸೂಚಿಸಿದೆ. ಜತೆಗೆ, ಅಲ್ಲಿನ ವಾಯುರಕ್ಷಣಾ ವ್ಯವಸ್ಥೆಗಳನ್ನೂ ಸಕ್ರಿಯಗೊಳಿಸಿದೆ.

ಒಟ್ಟು 51 ದೇಶಗಳಲ್ಲಿ ಅಮೆರಿಕದ 128 ಸೇನಾ ನೆಲೆಗಳಿವೆ. ಕುವೈತ್‌, ಇರಾಕ್‌ನಲ್ಲಿ 3, ಯುಎಇ, ಈಜಿಪ್ಟ್‌ ಮತ್ತು ಸೌದಿ ಅರೇಬಿಯಾದಲ್ಲಿ 2, ಕತಾರ್‌, ಸಿರಿಯಾ, ಜೋರ್ಡನ್‌ ಮತ್ತು ಬಹ್ರೈನ್‌ನಲ್ಲಿ 1 ಅಮೆರಿಕದ ನೆಲೆಗಳಿವೆ.