ಪಿಎಫ್‌ ಖಾತೆಗೆ ಹಣ ಜಮೆ ಆಗದಿದ್ರೆ ಇಪಿಎಫ್‌ಒ ಮಾಹಿತಿ

Employees' Provident Fund
Highlights

ತಮ್ಮ ಉದ್ಯೋಗದಾತರು ನಿಗದಿತ ಸಮಯಕ್ಕೆ ಸರಿಯಾಗಿ ಹಣ ಕಟ್ಟದಿದ್ದಲ್ಲಿ ನೌಕರರಿಗೆ ಅದರ ಮಾಹಿತಿ ನೀಡುವುದಾಗಿ ಪಿಂಚಣಿ ನಿಧಿ ನಿರ್ವಹಿಸುವ ಇಪಿಎಫ್‌ಒ ತಿಳಿಸಿದೆ. ಪ್ರಸ್ತುತ ಖಾತೆದಾರರ ಹಣ ಜಮಾವಣೆಯಾದ ಬಳಿಕ, ಖಾತೆದಾರರಿಗೆ ಎಸ್‌ಎಂಎಸ್‌/ಇ-ಮೇಲ್‌ ಮೂಲಕ ಮಾಹಿತಿ ನೀಡಲಾಗುತ್ತದೆ.

ನವದೆಹಲಿ: ತಮ್ಮ ಉದ್ಯೋಗದಾತರು ನಿಗದಿತ ಸಮಯಕ್ಕೆ ಸರಿಯಾಗಿ ಹಣ ಕಟ್ಟದಿದ್ದಲ್ಲಿ ನೌಕರರಿಗೆ ಅದರ ಮಾಹಿತಿ ನೀಡುವುದಾಗಿ ಪಿಂಚಣಿ ನಿಧಿ ನಿರ್ವಹಿಸುವ ಇಪಿಎಫ್‌ಒ ತಿಳಿಸಿದೆ. ಪ್ರಸ್ತುತ ಖಾತೆದಾರರ ಹಣ ಜಮಾವಣೆಯಾದ ಬಳಿಕ, ಖಾತೆದಾರರಿಗೆ ಎಸ್‌ಎಂಎಸ್‌/ಇ-ಮೇಲ್‌ ಮೂಲಕ ಮಾಹಿತಿ ನೀಡಲಾಗುತ್ತದೆ.

ಇನ್ನು ಮುಂದೆ ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ಮಾಸಿಕ ಹಣ ಜಮಾವಣೆಯಾಗದ ಖಾತೆದಾರರಿಗೂ ಮಾಹಿತಿ ನೀಡಲಾಗುತ್ತದೆ ಎಂದು ನೌಕರರ ಪಿಂಚಣಿ ನಿಧಿ ಸಂಸ್ಥೆ (ಇಪಿಎಫ್‌ಒ) ತಿಳಿಸಿದೆ. ಇ-ಪಾಸ್‌ಬುಕ್‌ ಆನ್‌ಲೈನ್‌ ಮತ್ತು ಉಮಂಗ್‌ ಮೊಬೈಲ್‌ ಆ್ಯಪ್‌ ಮತ್ತು ಮಿಸ್‌ಕಾಲ್‌ ನೀಡುವ ಮೂಲಕವೂ ಎಲ್ಲ ಸದಸ್ಯರು ಹಣ ಜಮೆ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು.

loader