ನವದೆಹಲಿ (ಮಾ. 05):  ಮುಂಬರುವ 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪರಿಸರಕ್ಕೆ ಹಾನಿಯನ್ನುಂಟು ಮಾಡುವ ಪ್ಲಾಸ್ಟಿಕ್‌ನಿಂದ ಸಿದ್ಧಪಡಿಸಲಾಗುವ ಯಾವುದೇ ವಸ್ತುಗಳನ್ನು ರಾಜಕೀಯ ಪ್ರಚಾರಕ್ಕೆ ಬಳಕೆ ಮಾಡಿಕೊಳ್ಳದಂತೆ ನಿಷೇಧ ಹೇರುವ ಪ್ರಸ್ತಾವನೆ ಬಗ್ಗೆ ಪರಿಶೀಲಿಸುವಂತೆ ಕೇಂದ್ರ ಚುನಾವಣಾ ಆಯೋಗ, ಕೇಂದ್ರ ಸರ್ಕಾರ ಹಾಗೂ ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಸೂಚಿಸಿದೆ.

ಮೋದಿಗೆ ಮುಸ್ಲಿಂ ಮತ ಬೇಕಿಲ್ಲ, ನಮಗೇ ಹಾಕಿ: ಜಮೀರ್ ಅಹ್ಮದ್ ಕರೆ

ಈ ಬಗ್ಗೆ ಸೋಮವಾರ ವಿಚಾರಣೆ ನಡೆಸಿದ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಮುಖ್ಯಸ್ಥ ನ್ಯಾ. ಆದರ್ಶ ಕುಮಾರ್‌ ಗೋಯೆಲ್‌ ಅವರು, ‘ಮುಂಬರುವ ಲೋಕಸಭಾ ಚುನಾವಣೆ ವೇಳೆ ಪ್ಲಾಸ್ಟಿಕ್‌ನಿಂದ ತಯಾರಿಸಲಾದ ಯಾವುದೇ ವಸ್ತುಗಳನ್ನು ಚುನಾವಣಾ ಪ್ರಚಾರ ಪರಿಕರಗಳಾಗಿ ಬಳಸಲು ನಿಷೇಧ ಹೇರುವ ಕುರಿತು ಚುನಾವಣಾ ಆಯೋಗ, ಪರಿಸರ ಸಚಿವಾಲಯ, ಅರಣ್ಯ ಮತ್ತು ಹವಾಮಾನ ಬದಲಾವಣೆ ಹಾಗೂ ಕೇಂದ್ರೀಯ ಮಾಲಿನ್ಯ ತಡೆ ಮಂಡಳಿ ಒಂದು ವಾರದೊಳಗೆ ಸಭೆ ಸೇರಿ ನಿರ್ಧರಿಸಬೇಕು ಎಂದು ಸೂಚಿಸಿದರು.

ರಫೇಲ್ ಡೀಲ್: ವಿಪಕ್ಷಗಳ ಟೀಕೆಗೆ ಮೋದಿ ಸಿಡಿಮಿಡಿ!

ಪಿವಿಸಿ, ಸಿಂಥೆಟಿಕ್‌ ಪ್ಲಾಸ್ಟಿಕ್‌ ಹಾಗೂ ಕ್ಲೋರಿನೇಟೆಡ್‌ ಪ್ಲಾಸ್ಟಿಕ್‌ ಸೇರಿದಂತೆ ಯಾವುದೇ ರೀತಿಯ ಪ್ಲಾಸ್ಟಿಕ್‌ ಬ್ಯಾನರ್‌ಗಳು, ಹೋರ್ಡಿಂಗ್ಸ್‌ಗಳನ್ನು ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರಕ್ಕೆ ಬಳಸದಂತೆ ನಿಷೇಧ ಹೇರಬೇಕು ಎಂದು ಕೋರಿ ಅರ್ಜಿಯೊಂದು ಸಲ್ಲಿಕೆಯಾಗಿತ್ತು.