ಪಂಚರಾಜ್ಯಗಳ ವಿಧಾನಸಭೆಗಳಿಗೆ ಮತದಾನಗಳು ಮುಕ್ತಾಯವಾದ ಬಳಿಕ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ನಸೀಮ್ ಝೈದಿ, ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಲಂಚ ಕೊಡುವುದನ್ನು ಶಿಕ್ಷಾರ್ಹ ಅಪರಾಧವಾಗಿ ಮಾಡಲು ಆಯೋಗವು ಪ್ರಯತ್ನಿಸುತ್ತಿದೆಯೆಂದಿದ್ದಾರೆ.

ನವದೆಹಲಿ (ಮಾ.10): ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಮತದಾರರಿಗೆ ಲಂಚ ಕೊಡುವುದನ್ನು ತಡೆಯಲು, ಅಂತಹ ಕೃತ್ಯಗಳನ್ನು ಗಂಭೀರ ಸ್ವರೂಪದ ಅಪರಾಧವಾಗಿ (Cognizable Offence) ಪರಿಗಣಿಸಲು ಚುನಾವಣಾ ಆಯೋಗ ಚಿಂತನೆ ನಡೆಸಿದೆ.

ಪಂಚರಾಜ್ಯಗಳ ವಿಧಾನಸಭೆಗಳಿಗೆ ಮತದಾನಗಳು ಮುಕ್ತಾಯವಾದ ಬಳಿಕ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ನಸೀಮ್ ಝೈದಿ, ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಲಂಚ ಕೊಡುವುದನ್ನು ಶಿಕ್ಷಾರ್ಹ ಅಪರಾಧವಾಗಿ ಮಾಡಲು ಆಯೋಗವು ಪ್ರಯತ್ನಿಸುತ್ತಿದೆಯೆಂದಿದ್ದಾರೆ.

ಬದಲಾಗುತ್ತಿರುವ ರಾಜಕೀಯ ಸನ್ನಿವೇಶಗಳ ಹಿನ್ನೆಲೆ ಹಾಗೂ ಚುನಾವಣಾ ಸಂದರ್ಭದಲ್ಲಿ ನಡೆಯುವ ಅವ್ಯವಹಾರಗಳನ್ನು ತಡೆಯಲು ಹೊಸ ಕಾನೂನಿನ ಅಗತ್ಯವಿದಯೆಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ರಾಜಕೀಯ ಪಕ್ಷಗಳಲ್ಲಿ ಆಂತರಿಕ ಸುಧಾರಣೆ ಹಾಗೂ ದೇಣಿಗೆ ಸಂಗ್ರಹ ಕುರಿತು ಚರ್ಚೆಯಾಗಬೇಕೆಂದು ಅವರು ಸಂದರ್ಭದಲ್ಲಿ ಹೇಳಿದ್ದಾರೆ.