ನವದೆಹಲಿ,[ಸೆ.19]: ಹವಾಲಾ ಹಣ ದಂಧೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ಡಿಕೆ ಶಿವಕುಮಾರ್‌ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಲಾಗಿದೆ.

ಇಡಿ ವಿಶೇಷ ಕೋರ್ಟ್ ನ್ಯಾಯಾಲಯ ಇಂದು (ಗುರುವಾರ) ಜಾಮೀನು ವಿಚಾರಣೆಯನ್ನು ಶನಿವಾರಕ್ಕೆ ಮುಂದೂಡಿ ಆದೇಶ ಹೊರಡಿಸಿದೆ. ಇದರಿಂದ ಡಿಕೆಶಿಗೆ ಇನ್ನೆರಡು ದಿನ ತಿಹಾರ್ ಜೈಲೇ ಗತಿ.

Breaking: ಆಸ್ಪತ್ರೆಯಿಂದ ತಿಹಾರ್ ಜೈಲಿಗೆ ಡಿಕೆಶಿ ಶಿಫ್ಟ್!

ನವದೆಹಲಿಯಲ್ಲಿ ಸಿಕ್ಕ 8.6 ಕೋಟಿ ಹಣ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದು, ಎರಡು ಬಾರಿ ಇಡಿ ವಶಕ್ಕೆ ನೀಡಿತ್ತು. 

ಆದ್ರೆ 3ನೇ ಬಾರಿ ಡಿಕೆಶಿ ಅವರನ್ನು ಅಕ್ಟೋಬರ್ 1ರ ತನಕ ನ್ಯಾಯಾಂಗ ಬಂಧನಕ್ಕೆ ನೀಡಿದ್ದು, ಇಂದು (ಗುರುವಾರ ಆರ್‌ಎಂಎಲ್  ವೈದ್ಯರು ಡಿಸ್ಚಾರ್ಜ್ ಮಾಡಿರುವ ಹಿನ್ನೆಲೆಯಲ್ಲಿ  ಡಿಕೆಶಿಯನ್ನು ತಿಹಾರ್ ಜೈಲಿಗೆ ಕೊಂಡೊಯ್ಯಲಾಗಿತ್ತು.

ಇಡಿ ಪರ ಅಡಿಷನಲ್ ಸಾಲಿಸಿಟರ್ ಜನರಲ್ ಕೆ. ಎಂ. ನಟರಾಜ್  ವಾದಮಂಡಿಸಿದರೆ, ಡಿಕೆಶಿ ಪರ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದರು.

ಇದೊಂದು 'ವೈಟ್ ಕಾಲರ್' ಪ್ರಕರಣವಾಗಿದ್ದು ಇನ್ನಷ್ಟು ವಿಚಾರಣೆಯ ಅಗತ್ಯವಿದೆ ಎಂದು ಇಡಿ ಪರ ವಕೀಲ ಪ್ರತಿಪಾದಿಸಿದರು. ಅಷ್ಟೇ ಅಲ್ಲದೇ ಈ ಪ್ರಕರಣ ದೇಶದ ಆರ್ಥಿಕತೆಗೆ ಬೆದರಿಕೆ . ಇದೇ ಅಕ್ರಮ ಆಸ್ತಿ ಪ್ರಕರಣದಲ್ಲಿ ಜಗನ್‌ ಮೋಹನ್ ರೆಡ್ಡಿ 16 ತಿಂಗಳು ಜೈಲಿನಲ್ಲಿದ್ದು, ಅಷ್ಟೇ ಅಲ್ಲದೇ,ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ 3 ವರ್ಷ ಜೈಲಿನಲ್ಲಿದ್ದರು ಎಂದು ಪ್ರಕರಣವನ್ನು ಸಹ ಜಡ್ಜ್ ಮುಂದೆ ಉಲ್ಲೇಖಿಸಿದರು.

ಅಷ್ಟೇ ಅಲ್ಲದೇ ಆರೋಪಿಯ ವಿದೇಶಿ ವ್ಯವಾರಗಳನ್ನು ತನಿಖೆ ನಡೆಸಬೇಕಿದೆ. ಇದರಿಂದ ಜೈಲಿನಲ್ಲಿ ವಿಚಾರಣೆ ಅಗತ್ಯವಿದೆ. ಹೀಗಾಗಿ  ಆರೋಪಿಗೆ (ಡಿಕೆಶಿ) ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ನಟರಾಜನ್ ಬಲವಾದ ವಾದ ಮಂಡಿಸಿದರು. 

ಶನಿವಾರ ಮತ್ತೆ  ಡಿಕೆಶಿ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ಅವರಿಗೆ ಜೈಲಾಗುತ್ತಾ? ಅಥವಾ ಬೇಲ್ ಸಿಗುತ್ತಾ? ಎನ್ನುವುದನ್ನು ಕಾದು ನೋಡಬೇಕು