ನವದೆಹಲಿ[ಸೆ.19]: ಹವಾಲಾ ದಂಧೆಯಿಂದಾಗಿ ಇಡಿ ಸುಳಿಗೆ ಸಿಕ್ಕ ಡಿಕೆ ಶಿವಕುಮಾರ್ ಬಂಧನವಾಗಿತ್ತು. ಆದರೆ ರಕ್ತದೊತ್ತಡ ಹಾಗೂ ಇನ್ನಿತರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಕಾಂಗ್ರೆಸ್‌ನ ಟ್ರಬಲ್ ಶೂಟರ್ ಡಿಕೆಶಿಗೆ ದೆಹಲಿಯ ಆರ್‌ಎಂಎಲ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೀಗ RML ಆಸ್ಪತ್ರೆ ವೈದ್ಯರ ವರದಿ ಮೇಲೆ ಡಿಕೆಶಿಯನ್ನು ತಿಹಾರ್ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಈ ಮೂಲಕ ಡಿಕೆಶಿ ತಿಹಾರ್ ಜೈಲು ಸೇರಿದ ಕರ್ನಾಟಕದ ಮೊದಲ ರಾಜಕಾರಣಿಯಾಗಿದ್ದಾರೆ.

"

ED ಕರೆಯಮೇರೆಗೆ ಲಕ್ಷ್ಮೀ ಹೆಬ್ಬಾಳ್ಕರ್ ದೆಹಲಿ ವಿಮಾನಯಾನ

ಹೌದು ಡಿಕೆಶಿ ಆರೋಗ್ಯ ಸುಧಾರಿಸಿಡುವುದಾಗಿ RML ಆಸ್ಪತ್ರೆ ವೈದ್ಯರು ವರದಿ ನೀಡಿದ್ದ ಹಿನ್ನೆಲೆ ಅವರನ್ನು ತಿಹಾರ್ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಇನ್ನಿ ನ್ಯಾಯಾಂಗ ಬಂಧನದಲ್ಲಿರುವ ಡಿಕೆಶಿ ಜಾಮೀನು ಪಡೆಯಲು ಹರ ಸಾಹಸ ನಡೆಸುತ್ತಿದ್ದು, ಅಲ್ಲಿಯವರೆಗೂ ತಿಹಾರ್ ಜೈಲಿನಲ್ಲೇ ಇರಬೇಕಾಗುತ್ತದೆ. ತಿಹಾರ್ ಜೈಲಿನ ಬ್ಯಾರೆಕ್ ನಂಬರ್ 7ರಲ್ಲಿ ಡಿಕೆಶಿ ಬಂಧಿಸಲಾಗುತ್ತದೆ. INX ಮೀಡಿಯಾ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಜೈಲು ಪಾಲಾಗಿರುವ ಕಾಂಗ್ರೆಸ್ ನಾಯಕ ಪಿ. ಚಿದಂಬರಂರನ್ನು ಇಟ್ಟಿರುವ ಜೈಲು ಕೊಠಡಿಯ ಪಕ್ಕದಲ್ಲೇ ಡಿಕೆಶಿ ಸೆಲ್ ಇರಲಿದೆ ಎಂಬ ಮಾಹಿತಿ ಲಭ್ಯವಾಗಿದೆ

ಡಿಕೆಶಿಗೆ ಬೇಲಿಲ್ಲ.. ವೈದ್ಯರ ವರದಿ ನಂತರ ಆಸ್ಪತ್ರೆಯೋ? ಜೈಲೋ?

ಇಂದು ಮಧ್ಯಾಹ್ನ 3 ಗಂಟೆಗೆ ಡಿಕೆಶಿ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ಅವರಿಗೆ ಜೈಲಾಗುತ್ತಾ? ಅಥವಾ ಬೇಲ್ ಸಿಗುತ್ತಾ? ಕಾದು ನೋಡಬೇಕಷ್ಟೇ