ನವದೆಹಲಿ [ಆ. 31]  ಬರೋಬ್ಬರಿ 5  ಗಂಟೆಗಳ ವಿಚಾರಣೆ ಮುಗಿಸಿ ಡಿ.ಕೆ.ಶಿವಕುಮಾರ್ ನವದೆಹಲಿಯ ಜಾರಿ ನಿರ್ದೇಶನಾಲಯ[ಇಡಿ] ಈ ಕಚೇರಿಯಿಂದ ಹೊರಬಂದಿದ್ದಾರೆ.

ವಿಚಾರಣೆ ಮುಗಿಸಿ ಹೊರಬಂದ ಶಿವಕುಮಾರ್ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ನಾಳೆ[ಶನಿವಾರ] ಬೆಳಗ್ಗೆ 11 ಗಂಟೆಗೆ ಮತ್ತೆ ವಿಚಾರಣೆಗೆ ಬರಲು ಸೂಚನೆ ನೀಡಲಾಗಿದೆ. ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಬರಲು ಸಮನ್ಸ್ ಕೊಟ್ಟಿದ್ದಾರೆ. ಕೊಟ್ಟ ಮಾತಿನಂತೆ ಇ.ಡಿ. ವಿಚಾರಣೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಹೇಳಿದ್ದಾರೆ.

ಬ್ಯಾಂಕ್‌ಗಳ ವಿಲೀನ, ಡಿಕೆಶಿಗೆ ED ಕುಣಿಕೆ: ಇಲ್ಲಿವೆ ಆ. 30ರ ಟಾಪ್ ಸುದ್ದಿಗಳು

ಇಡಿ ವಿಚಾರಣೆಗೆ ತಡೆ ಕೋರಿ ಡಿಕೆಶಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿತ್ತು. ಇದಾದ ಮೇಲೆ ಡಿಕೆಶಿ ಬಂಧನ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಇದೇ ಕಾರಣಕ್ಕೆ ಶಿವಕುಮಾರ್ ತರಾತುರಿಯಲ್ಲಿ ನವದೆಹಲಿಯ ಇಡಿ ಕಚೇರಿಗೆ ಶುಕ್ರವಾರ ಸಂಜೆ ಹಾಜರಾಗಿದ್ದರು.