ನವದೆಹಲಿ[ಆ. 31]  ಡಿಕೆ ಶಿವಕುಮಾರ್ ಅವರಿಗೆ ಒಂದು ದಿನದ ರಿಲೀಫ್ ಸಿಕ್ಕಿದೆ. ಗೌರಿ ಗಣೇಶ ಹಬ್ಬವನ್ನು ಲೆಕ್ಕಿಸದೆ ಶಿವಕುಮಾರ್ ಮತ್ತೆ ಸೋಮವಾರ 11 ಗಂಟೆಗೆ ವಿಚಾರಣೆಗೆ ಹಾಜರಾಗಲೇಬೇಕಿದೆ.

ಶನಿವಾರ ವಿಚಾರಣೆ ಮುಗಿಸಿ ಹೊರಬಂದ ಡಿಕೆ ಶಿವಕುಮಾರ್ ಮಾಧ್ಯಮಗಳೊಂದಿಗೆ ಮಾತನಾಡಿದರು. ಸೋಮವಾರ ವಿಚಾರಣೆಗೆ ಬರಲು ಸೂಚನೆ ನೀಡಿದ್ದಾರೆ.  ಇಡಿ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇನೆ. ಸೋಮವಾರ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ತಿಳಿಸಿದ್ದಾರೆ ಎಂದರು.

ಕರ್ನಾಟಕಕ್ಕೆ ಹೊಸ ಸಿಎಂ, ಮೋದಿಗೆ ಸ್ವಾಮಿ ಶಾಕ್; ಇಲ್ಲಿವೆ ಆ.31ರ ಟಾಪ್ 10 ಸುದ್ದಿ!

ಗೌರಿ-ಗಣೇಶ ಹಬ್ಬಕ್ಕೆ ವಿನಾಯ್ತಿ ನೀಡುವಂತೆ ಕೇಳಿದ್ದೆ. ನನ್ನ ಮನವಿಗೆ ಅಧಿಕಾರಿಗಳು ಒಪ್ಪಲಿಲ್ಲ, ಒಳ್ಳೆಯದಾಗಲಿ.. ನಾನು ಸೋಮವಾರ ಮತ್ತೆ ವಿಚಾರಣೆಗೆ ಹಾಜರಾಗುವೆ ಎಂದು ಶಿವಕುಮಾರ್ ತಿಳಿಸಿದರು.