ಇವಿಎಂ ಹ್ಯಾಕ್ ಮಾಡುವ ಸವಾಲು ಹಾಕಿದಾಗ ಚುನಾವಣಾ ಆಯೋಗದ ನೀತಿ ನಿಯಮಗಳನ್ನು ಮೀರಿ ಹ್ಯಾಕ್ ಮಾಡಬಹುದು ಎಂದು ನಾವು ಹೇಳಿರಲಿಲ್ಲವೆಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

ನವದೆಹಲಿ (ಮೇ.27): ಇವಿಎಂ ಹ್ಯಾಕ್ ಮಾಡುವ ಸವಾಲು ಹಾಕಿದಾಗ ಚುನಾವಣಾ ಆಯೋಗದ ನೀತಿ ನಿಯಮಗಳನ್ನು ಮೀರಿ ಹ್ಯಾಕ್ ಮಾಡಬಹುದು ಎಂದು ನಾವು ಹೇಳಿರಲಿಲ್ಲವೆಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹ್ಯಾಕಥಾನ್ ಮಾಡುವಾಗ ಇವಿಎಂ ಮದರ್ ಬೋರ್ಡನ್ನು ಬದಲಾಯಿಸುತ್ತೇವೆ ಎಂದು ಆಪ್ ಹೇಳಿತ್ತು. ಇದಕ್ಕೆ ಪ್ರತಿಕ್ರಯಿಸಿದ ಚುನಾವಣಾ ಆಯೋಗ ವಿದ್ಯುನ್ಮಾನ ಯಂತ್ರಗಳ ಇಂಟರ್ನಲ್ ಸರ್ಕ್ಯೂಟ್ ಬದಲಾಯಿಸುವುದೆಂದರೆ ಆ ಡಿವೈಸನ್ನೇ ಬದಲಾಯಿಸಿದಂತೆ. ಆಯೋಗದ ಸುರಕ್ಷತಾ ಹಾಗೂ ಭದ್ರತಾ ಪ್ರೋಟೋಕಾಲ್ ಮಿತಿಯೊಳಗೆ ಹ್ಯಾಕಥಾನ್ ನಡೆಸಲಾಗುವುದು ಎಂದು ಚುನಾವಣಾ ಆಯೋಗ ಇಂದು ಸ್ಪಷ್ಟಪಡಿಸಿದೆ.

ಹ್ಯಾಕಥಾನನ್ನು ಮಾಡುವಾಗ ನೀತಿ ನಿಯಮಾವಳಿಗಳನ್ನು ಆಯೋಗ ಹೇರಿರುವುದನ್ನು ಆಪ್ ಆಕ್ಷೇಪಿಸಿದೆ. ಮದರ್ ಬೋರ್ಡ್ ಬದಲಾಯಿಸಲು ಅವಕಾಶ ನೀಡಬೇಕೆಂದು ಆಪ್ ಒತ್ತಾಯಿಸಿದೆ. ಕಾಂಗ್ರೆಸ್ ಕೂಡಾ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ಮದರ್ ಬೋರ್ಡ್ ತೆಗೆಯಲು ಅವಕಾಶ ನೀಡಬೇಕೆಂದು ಎರಡೂ ಪಕ್ಷಗಳು ಕೇಳಿವೆ. ಆದರೆ ಚುನಾವಣಾ ಆಯೋಗ ನಾವು ಇದಕ್ಕೆ ಅವಕಾಶ ನೀಡುತ್ತೇವೆಂದು ಭರವಸೆ ನೀಡಿರಲಿಲ್ಲವೆಂದು ಹೇಳಿದೆ.

ಜೂನ್ 3 ರಂದು ಹ್ಯಾಕಥಾನ್ ನಡೆಯಲಿದೆ.