Asianet Suvarna News Asianet Suvarna News

ಆ ಸಿಗರೇಟ್ ಬಿಟ್ಟು ಇ-ಸಿಗರೇಟ್ ಸೇದಿದಾತನಿಗೆ ಸಿಕ್ಕ ಪ್ರತಿಫಲ!

ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ, ಧೂಮಪಾನ ಕ್ಯಾನ್ಸರ್ ಕಾರಕ ಎಂಬೆಲ್ಲಾ ಜಾಗೃತಿ ಮಾತುಗಳನ್ನು ಪದೇ ಪದೇ ಹೇಳಲಾಗುತ್ತಿರುತ್ತದೆ. ಆದರೆ ಇಲ್ಲೊಬ್ಬನಿಗೆ ಇ-ಸಿಗರೇಟ್ ಮಾರಕವಾಗಿ ಪರಿಣಮಿಸಿದೆ.

E Cigarette Explodes in Teen Mouth Breaks Jaw
Author
Bengaluru, First Published Jun 20, 2019, 5:34 PM IST

ಲಂಡನ್[ಜೂ. 20]  ಇ-ಸಿಗರೇಟ್ ನಿಂದ ಅಪಾಯ ಇದೆಯೋ? ಇಲ್ಲವೋ? ಎಂಬುದರ ಬಗ್ಗೆ ಅಧ್ಯಯನಗಳು ನಡೆಯುತ್ತಲೇ ಇವೆ.  ಆದರೆ ಇ ಸಿಗರೇಟ್ ಕೆಲವೊಮ್ಮೆ ಸ್ಫೋಟವಾಗಬಹುದು!

ಹೌದು.. 17 ವರ್ಷದ ಯುವಕನೊಬ್ಬ ಇ-ಸಿಗರೇಟ್ ಸೇವನೆ ಮಾಡುತ್ತಿದ್ದಾಗ ಬಾಯಲ್ಲಿಯೇ ಸ್ಫೋಟಗೊಂಡಿದೆ. ಬಾಯಲ್ಲಿ ಸ್ಫೋಟಗೊಂಡ ಪರಿಣಾಮ ದವಡೆ ಸಂಪೂರ್ಣ ಛಿದ್ರ ಛಿದ್ರವಾಗಿದೆ ಎಂದು ದಿ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ ವರದಿಯಲ್ಲಿ ಹೇಳಿದೆ.

ಜೀವಕ್ಕೆ ಕುತ್ತು ತರಬಹುದು ಇ-ಸಿಗರೇಟ್

ಸ್ಫೋಟವಾದ 2 ಗಂಟೆ ನಂತರ ಯುವಕನನ್ನು ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ಆಘಾತಕ್ಕೆ ಗುರಿಯಾದ  ಯುವಕನ ಕೆಳ ದವಡೆ ಸಂಪೂರ್ಣ ಡ್ಯಾಮೇಜ್ ಆಗಿದ್ದು ಹರಸಾಹಸ ಮಾಡಿ ಚಿಕಿತ್ಸೆ ನೀಡಲಾಗಿದೆ ಎಂದು ಡಾ. ಕೈಟೆ ರಸೆಲ್ ಹೇಳಿದ್ದಾರೆ.

ಅನಿವಾರ್ಯವಾಗಿ ಕೆಲ ಹಲ್ಲುಗಳನ್ನು ತೆಗೆಯಲೆಬೇಕಾಗಿತ್ತು. ಹೊಲಿಗೆ ಹಾಕಲು ಈ ಕೆಲಸ ಮಾಡಲೇಬೇಕಾಗಿತ್ತು. ಆರು ವಾರಗಳ ನಂತರ ಮಾತ್ರ ಏನನ್ನಾದರೂ ಹೇಳಲು ಸಾಧ್ಯ ಎಂದು ಯುವಕನ ಪರಿಸ್ಥಿತಿ ಬಗ್ಗೆ ವೈದ್ಯರು ವಿವರಣೆ ನೀಡಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಟೆಕ್ಸಾಸ್ ನಲ್ಲಿ ಇಂಥದ್ದೇ ಪ್ರಕರಣ ವರದಿಯಾಗಿತ್ತು.

Follow Us:
Download App:
  • android
  • ios