ಸಿಗರೇಟ್ ಸೇವನೆಯಿಂದ ಮುಕ್ತಿ ಪಡೆಯಲು ಇ-ಸಿಗರೇಟ್ ಬಳಸಲಾಗುತ್ತದೆ. ಆದರಿದೂ ಸೇಫ್ ಅಲ್ಲ. ಇದೇ ಪ್ರಾಣಕ್ಕೆ ತರುತ್ತೆ ಕುತ್ತು. 

ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂಬುವುದು ಎಲ್ಲರಿಗೂ ಗೊತ್ತು. ಆದರೂ, ಈ ಚಟ ಬಿಡ್ಲಿಕ್ಕೆ ಮನಸ್ಸು ಮಾಡೋಲ್ಲ. ಮನಸ್ಸು ಮಾಡಿದವರಿಗೆ ಬಿಡುವುದೂ ಸುಲಭವಲ್ಲ. ಈ ಚಟದಿಂದ ಮುಕ್ತರಾಗಲೇ ಬೇಕೆಂದು ಕೆಲವರು ಇ-ಸಿಗರೇಟ್ ಮೊರೆ ಹೋಗುವವರಿದ್ದಾರೆ. ಇದು ಆರೋಗ್ಯಕ್ಕೆ ಒಳ್ಳೆಯದಾ?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಲ್ಲ ಇದೂ ಆರೋಗ್ಯಕ್ಕೆ ಕುತ್ತು ಎನ್ನುತ್ತೆ ಸಂಶೋಧನೆ. ನೋಡಲು ಸಿಂಪಲ್ ಲುಕ್ ಇರೋ, ಕಲರ್, ವಿಭಿನ್ನ ಡಿಸೈನ್‌ನಲ್ಲಿ ಸಿಗೋ ಇದನ್ನು ಸುಲಭವಾಗಿಯೇ ಎಲ್ಲಿ ಬೇಕಾದರೂ ತೆಗೆದುಕೊಂಡು ಹೋಗಬಹುದು. 

ಇ-ಸಿಗರೇಟ್ ಬಳಸುವವರ ಶ್ವಾಸಕೋಶಕ್ಕೆ ಗಂಭೀರ ಪರಿಣಾಮ ಬೀರುತ್ತದೆ. ಇಂಥ ಸಿಗರೇಟ್‌ಗಳು ಬ್ಯಾಟರಿಯಿಂದ ಕೆಲಸ ಮಾಡುತ್ತಿದ್ದು, ಹೊಗೆ ಬರಲು ಮೂಲ ಕಾರಣ ಅದರಲ್ಲಿರುವ ರಾಸಾಯನಿಕ ಅಂಶ. ಇದು ದೇಹವನ್ನೇ ಸುಡುತ್ತದೆ. 

ಅಷ್ಟೇ ಅಲ್ಲದೆ ಹಲವಾರು ಫ್ಲೇವರ್‌ಗಳಲ್ಲಿಯೂ ಇ-ಸಿಗರೇಟ್ ಲಭ್ಯ. ಇದು ಸಾಮಾನ್ಯ ಸಿಗರೇಟ್‌ಗಿಂತ ಎಲ್ಲ ರೀತಿಯಲ್ಲಿಯೂ ಡೇಂಜರ್. ಇದರಿಂದ ಶ್ವಾಸಕೋಶ ಉರಿ ಸೇರಿ ಇತರೆ ಅಡ್ಡ ಪರಿಣಾಮಗಳು ಬೀರುತ್ತವೆ. 

ಈ ಸಮಸ್ಯೆಗಳಿಗೆ ಚಿಕಿತ್ಸೆ ಲಭ್ಯವಿದ್ದರೂ, ಸಿಗರೇಟ್ ಸೇದದೇ ಹೋದರೇನೇ ಬೆಸ್ಟ್. ನೋಡಿ ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ.