RSS ಕಾರ್ಯಕರ್ತ ಶರತ್ ಶವಯಾತ್ರೆ ವೇಳೆ ಕಲ್ಲು ತೂರಾಟದಿಂದ ಉದ್ವಿಗ್ನಗೊಂಡಿದ್ದ ಬಂಟ್ವಾಳ ತಾಲೂಕಿನ ಬಿ.ಸಿ. ರೋಡ್ ಬಹುತೇಕ ಶಾಂತ ಸ್ಥಿತಿಗೆ ಮರಳಿದೆ. ಪ್ರಕರಣದ ನಂತರ ಇಡೀ ಬಂಟ್ವಾಳ ತಾಲೂಕಿನಲ್ಲಿ ಬಿಗಿ ಪೊಲೀಸ್​ ಬಂದೋಬಸ್ತ್ ಮಾಡಲಾಗಿದೆ. ಇಷ್ಟಾದರೂ ರಾಜಕೀಯಪಕ್ಷಗಳ ಕೆಸರೆರಚಾಟ ಮಾತ್ರ ಇನ್ನೂ ನಿಂತಿಲ್ಲ. ತಮ್ಮ ಮತ್ತು ಸಿದ್ಧರಾಮಯ್ಯರ ಪುತ್ರ ಶೋಕವನ್ನು ನೆನಪಿಸಿ ಕೇಂದ್ರ ಸಚಿವ ಸಿವಿ ಸದಾನಂದ ಗೌಡ ಅವರು ಸಿಎಂ ಸಿದ್ಧರಾಮಯ್ಯಗೆ ಪ್ರಶ್ನೆ ಮಾಡಿದ್ದಾರೆ.

ಬೆಂಗಳೂರು(ಜು.10): RSS ಕಾರ್ಯಕರ್ತ ಶರತ್ ಶವಯಾತ್ರೆ ವೇಳೆ ಕಲ್ಲು ತೂರಾಟದಿಂದ ಉದ್ವಿಗ್ನಗೊಂಡಿದ್ದ ಬಂಟ್ವಾಳ ತಾಲೂಕಿನ ಬಿ.ಸಿ. ರೋಡ್ ಬಹುತೇಕ ಶಾಂತ ಸ್ಥಿತಿಗೆ ಮರಳಿದೆ. ಪ್ರಕರಣದ ನಂತರ ಇಡೀ ಬಂಟ್ವಾಳ ತಾಲೂಕಿನಲ್ಲಿ ಬಿಗಿ ಪೊಲೀಸ್​ ಬಂದೋಬಸ್ತ್ ಮಾಡಲಾಗಿದೆ. ಇಷ್ಟಾದರೂ ರಾಜಕೀಯಪಕ್ಷಗಳ ಕೆಸರೆರಚಾಟ ಮಾತ್ರ ಇನ್ನೂ ನಿಂತಿಲ್ಲ. ತಮ್ಮ ಮತ್ತು ಸಿದ್ಧರಾಮಯ್ಯರ ಪುತ್ರ ಶೋಕವನ್ನು ನೆನಪಿಸಿ ಕೇಂದ್ರ ಸಚಿವ ಸಿವಿ ಸದಾನಂದ ಗೌಡ ಅವರು ಸಿಎಂ ಸಿದ್ಧರಾಮಯ್ಯಗೆ ಪ್ರಶ್ನೆ ಮಾಡಿದ್ದಾರೆ.

RSS ಕಾರ್ಯಕರ್ತ ಶರತ್ ಹತ್ಯೆ ವಿಚಾರದಲ್ಲಿ ಟ್ವಿಟರ್'ನಲ್ಲೇ ಸಿಎಂ ಸಿದ್ಧರಾಮಯ್ಯಗೆ ಪ್ರಶ್ನಿಸಿರುವ ಡಿವಿ ಸದಾನಂದ ಗೌಡ "ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯನವರೇ ನಾನು ನೀವು ಸಮಾನ ದುಃಖಿಗಳೆಂದು ಒಂದು ಸಂಧರ್ಭದಲ್ಲಿ ಹೇಳಿದ್ದೆ . ಮೃತಪಟ್ಟ RSS ಕಾರ್ಯಕರ್ತನ ತಂದೆಯ ಸ್ಥಾನದಲ್ಲಿ ನಿಮ್ಮನ್ನು ಕಲ್ಪಿಸಿಕ್ಕೊಳ್ಳಿ. ಮೃತ ಶರತ್'ಗೆ ನ್ಯಾಯ ದೊರಕಿಸಿ. ಶರತ್'ನ ತಂದೆಯ ಮುಖವನ್ನು ನೆನಸಿಕೊಂಡರೆ ತುಂಬಾ ಸಂಕಟವಾಗುತ್ತಿದೆ. ನಿಮಗೇನೂ ಅನಿಸುತ್ತಿಲ್ಲವಾದರೆ ಅದನ್ನು ಯೋಜಿತ ಕೃತ್ಯವೆಂದು ತಿಳಿಯಲಾ?" ಎಂದಿದ್ದಾರೆ.

Scroll to load tweet…
Scroll to load tweet…
Scroll to load tweet…

ಮಂಗಳೂರಿನಲ್ಲಿ ಕೋಮುಗಲಭೆಯಿಂದಾಗಿ ಕಳೆದ 43 ದಿನಗಳಿಂದ ನಿಷೇಧಾಜ್ಞೆ ಜಾರಿಯಲ್ಲಿದೆ. ಈ ನಡುವೆ ನಡೆದ RSS ಕಾರ್ಯಕರ್ತನ ಕೊಲೆ ದೇಶದಾದ್ಯಂತ ಸದ್ದು ಮಾಡಿದೆ. ಇನ್ನು ರಾಜಕೀಯ ಪಕ್ಷಗಳು ಒಬ್ಬರ ಮೇಲೊಬ್ಬರು ಬಟ್ಟು ಮಾಡುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಕೇಂದ್ರ ಸಚಿವ ಡಿವಿ ಸದಾನಂದ ಗೌಡರ ಪ್ರಶ್ನೆಗೆ ಸಿಎಂ ಹೇಗೆ ಉತ್ತರಿಸುತ್ತಾರೆ ಕಾದು ನೋಡಬೇಕಿದೆ.