ಲಂಡನ್‌ [ಜು.1]: ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳ ಪೈಕಿ ಒಬ್ಬರಾದ ಸಂಯುಕ್ತ ಅರಬ್‌ ಸಂಸ್ಥಾನದ ಪ್ರಧಾನಿ ಹಾಗೂ ಉಪಾಧ್ಯಕ್ಷ ಶೇಕ್‌ ಮೊಹಮ್ಮದ್‌ ಬಿನ್‌ ರಶೀದ್‌ ಮಕ್ತೋಮ್‌ ಅವರ 6ನೇ ಪತ್ನಿ ಹಯಾ ಬಿಂಟ್‌ ಅಲ್‌ ಹುಸೇನ್‌ ಅಪಾರ ಹಣದೊಂದಿಗೆ ದೇಶವನ್ನೇ ಬಿಟ್ಟು ಪರಾರಿಯಾಗಿದ್ದಾಳೆ. 

ಪತಿಯಿಂದ ವಿಚ್ಛೇದನ ಬಯಸಿರುವ ಹಯಾ ಬಿಂಟ್‌, 270 ಕೋಟಿ ರು. ಹಣ ಮತ್ತು ತನ್ನ ಇಬ್ಬರು ಮಕ್ಕಳೊಂದಿಗೆ ಬ್ರಿಟನ್‌ನಲ್ಲಿ ರಾಜಾಶ್ರಯ ಪಡೆದುಕೊಂಡಿದ್ದಾಳೆ ಎನ್ನಲಾಗುತ್ತಿದೆ. 

ಆಕ್ಸ್‌ಫರ್ಡ್‌ನಲ್ಲಿ ವ್ಯಾಸಂಗ ಮಾಡಿರುವ ಹಯಾ, ಮೇ 20ರ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ದುಬೈ ಬಿಟ್ಟು ಜರ್ಮನಿಯಲ್ಲಿ ನೆಲೆಸಿದ್ದರು. ಪತ್ನಿಯನ್ನು ಜರ್ಮನಿಯಿಂದ ದುಬೈಗೆ ಗಡೀಪಾರು ಮಾಡುವಂತೆ ಬಿನ್‌ ರಶೀದ್‌ ಕೋರಿಕೆಯನ್ನು ಜರ್ಮನಿ ಸರ್ಕಾರ ತಿರಸ್ಕರಿಸಿತ್ತು. ಬಳಿಕ ಹಯಾ ಲಂಡನ್‌ಗೆ ತೆರಳಿದ್ದಾರೆ ಎನ್ನಲಾಗಿದೆ.