ಕುಡಿದ ಅಮಲಿನಲ್ಲಿ ವಿದ್ಯಾರ್ಥಿಗೆ ಮನಬಂದಂತೆ ಥಳಿಸಿದ ಶಿಕ್ಷಕ

news | Wednesday, June 6th, 2018
Suvarna Web Desk
Highlights

ಕುಡಿದ ಅಮಲಿನಲ್ಲಿ ವಿದ್ಯಾರ್ಥಿಗೆ ಮನಬಂದತೆ ಸಹ ಶಿಕ್ಷಕರೊಬ್ಬರು ಮನಬಂದಂತೆ ಥಳಿಸಿರುವ ಘಟನೆ ಸಿಂಧಗಿ ತಾಲೂಕಿನ ಮೊರಟಗಿ ಸರ್ಕಾರಿ ಶಾಲೆಯಲ್ಲಿ ನಡೆದಿದೆ. ಥಳಿತಕ್ಕೊಳಗಾದ ವಿದ್ಯಾರ್ಥಿ ಕಣ್ಣಿಗೆ ತೀವ್ರ ಪೆಟ್ಟು ಬಿದ್ದಿದೆ. 

ವಿಜಯಪುರ (ಜೂ. 06): ಕುಡಿದ ಅಮಲಿನಲ್ಲಿ ವಿದ್ಯಾರ್ಥಿಗೆ ಮನಬಂದತೆ ಸಹ ಶಿಕ್ಷಕರೊಬ್ಬರು ಮನಬಂದಂತೆ ಥಳಿಸಿರುವ ಘಟನೆ ಸಿಂಧಗಿ ತಾಲೂಕಿನ ಮೊರಟಗಿ ಸರ್ಕಾರಿ ಶಾಲೆಯಲ್ಲಿ ನಡೆದಿದೆ.  ಥಳಿತಕ್ಕೊಳಗಾದ ವಿದ್ಯಾರ್ಥಿ ಕಣ್ಣಿಗೆ ತೀವ್ರ ಪೆಟ್ಟು ಬಿದ್ದಿದೆ. 

4 ನೇ ತರಗತಿಯಲ್ಲಿ ಓದುತ್ತಿದ್ದ ನಿಂಗಪ್ಪ ಕಕ್ಕಳ ಥಳಿತಕ್ಕೊಳಗಾದ ವಿದ್ಯಾರ್ಥಿ.  ಕಾಟಾಚಾರಕ್ಕೆ ಸರ್ಕಾರಿ ಆಸ್ಪತ್ರೆಯಲ್ಲಿ ತೋರಿಸಿ ಕೈ ತೊಳೆದುಕೊಂಡಿದ್ದಾರೆ ಶಿಕ್ಷಕ. ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕರೆದ್ಯೂಯುವಂತೆ ವೈದ್ಯರಿಂದ ಸಲಹೆ ನೀಡಿದ್ದಾರೆ. ಆದರೆ ಮಾನವೀಯತೆ ಮರೆತು ವಿದ್ಯಾರ್ಥಿಯನ್ನು ಮಾರ್ಗಮಧ್ಯದಲ್ಲಿ ಬಿಟ್ಟು ಹೋಗಿದ್ದಾರೆ. 

ಮಗನ ಕಣ್ಣು ಹೋಗಿದೆ. ತಮ್ಮ ಮಗನ ದುಸ್ಥಿತಿಗೆ ನಗನೂರ ಶಿಕ್ಷಕನೇ ಕಾರಣವೆಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಶಿಕ್ಷಕನ ಅಮಾನವಿಯ ಕೃತ್ಯಕ್ಕೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 
 

Comments 0
Add Comment

  Related Posts

  Teacher slaps Student

  video | Thursday, April 12th, 2018

  Bidar Teacher Sex Scandal

  video | Wednesday, April 4th, 2018

  Bidar Teacher Sex Scandal

  video | Wednesday, April 4th, 2018

  Teacher slaps Student

  video | Thursday, April 12th, 2018
  Shrilakshmi Shri