ಕಾರು ಡಿಕ್ಕಿ ಹೊಡೆದುದನ್ನು ನೋಡಿ ಅಲ್ಲಿದ್ದ ಟ್ಯಾಕ್ಸಿ ಡ್ರೈವರ್‍ ಮಹಿಳೆಯ ಸಹಾಯಕ್ಕೆ ಆಗಮಿಸಿದಾಗ ಮಹಿಳೆ ಆ ಡ್ರೈವರ್ ಮೇಲೆ ಹಲ್ಲೆ ನಡೆಸಿದ್ದಾರೆ

ಕೋಲ್ಕತ್ತಾ(ಜು.29): ಸಂಚಾರ ನಿಯಮ ಉಲಂಘನೆ ಪ್ರಶ್ನಿಸಿದ ಪೊಲೀಸ್ ಗೆ ಸಿಕ್ಕಿದೆ ಬಂಪರ್ ಆಫರವೊಂದು ಸಿಕ್ಕಿದೆ. ಮದ್ಯದ ಅಮಲಿನಲ್ಲಿ ಕಾರು ಓಡಿಸಿಕೊಂಡು ಬಂದ ಮಹಿಳೆ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿರುವುದನ್ನ ಪ್ರಶ್ನಿಸಿದ ಪೊಲೀಸ್‍ಗೆ ಮುತ್ತಿನ ಮಳೆಗೆರೆದಿದ್ದಾಳೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

 26ರಂದು ರಾತ್ರಿ ಪಾರ್ಟಿಯೊಂದರಲ್ಲಿ ಭಾಗವಹಿಸಿ ಮದ್ಯದ ಅಮಲಿನಲ್ಲಿ ಗಾಡಿ ಓಡಿಸಿಕೊಂಡು ಬಂದ 30 ಹರೆಯದ ಮಹಿಳೆಯೊಬ್ಬರು ಕೊಲ್ಕತದ ಸಾಲ್ಟ್ ಲೇಕ್ ಬಳಿಯ ರಸ್ತೆ ವಿಭಜಕಕ್ಕೆ ವಾಹನ ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿ ಹೊಡೆದುದನ್ನು ನೋಡಿ ಅಲ್ಲಿದ್ದ ಟ್ಯಾಕ್ಸಿ ಡ್ರೈವರ್‍ ಮಹಿಳೆಯ ಸಹಾಯಕ್ಕೆ ಆಗಮಿಸಿದಾಗ ಮಹಿಳೆ ಆ ಡ್ರೈವರ್ ಮೇಲೆ ಹಲ್ಲೆ ನಡೆಸಿದ್ದಾರೆ. ಇದನ್ನ ಪ್ರಶ್ನಿಸಿದಕ್ಕೆ ಟ್ರಾಫಿಕ್ ಪೊಲೀಸ್‍ನ್ನು ಆಲಿಂಗಿಸಿ ಮುತ್ತಿನ ಮಳೆಗೆರೆದ ಘಟನೆಯೊಂದು ನಡೆದಿದೆ. ಕಾರಿನಲ್ಲಿದ್ದ ಇಬ್ಬರು ಮಹಿಳೆ ಮತ್ತು ಓರ್ವ ವ್ಯಕ್ತಿಯನ್ನು ಪೊಲೀಸರು ಬಿದಾನ್‍ನಗರ್ ದಕ್ಷಿಣ ಪೊಲೀಸ್ ಠಾಣೆಗೆ ಕರೆದೊಯ್ದಿದ್ದು, ಮಹಿಳೆ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

(ಸಾಂದರ್ಭಿಕ ಚಿತ್ರ)