ಎಚ್ಚರ : ಮಹಿಳೆಯರ ಪೀಡಿಸಿದರೆ ರದ್ದಾಗುತ್ತೆ ಡಿಎಲ್

Driving license to be cancelled if women is harassed
Highlights

ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಕಡಿವಾಣ ಹಾಕಲು ಮಧ್ಯಪ್ರದೇಶದ ಜಿಲ್ಲಾಡಳಿತವೊಂದು ಹೊಸ ಯೋಜನೆ ಪ್ರಸ್ತಾಪಿಸಿದೆ. ಮಹಿಳೆ ಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಪದೇ ಪದೇ ಆರೋಪಿತರಾಗಿದ್ದಲ್ಲಿ ಇಲ್ಲವೇ ದೋಷಿ ಎಂದು ಘೋಷಿತನಾದಲ್ಲಿ, ಅಂತಹವರ ಡ್ರೈವಿಂಗ್ ಪರವಾನಗಿ ರದ್ದು ಪಡಿಸಲು ಜಿಲ್ಲಾಡಳಿತ ನಿರ್ಧರಿಸಿದೆ. 

ಇಂದೋರ್: ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಕಡಿವಾಣ ಹಾಕಲು ಮಧ್ಯಪ್ರದೇಶದ ಜಿಲ್ಲಾಡಳಿತವೊಂದು ಹೊಸ ಯೋಜನೆ ಪ್ರಸ್ತಾಪಿಸಿದೆ.

ಮಹಿಳೆ ಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಪದೇ ಪದೇ ಆರೋಪಿತರಾಗಿದ್ದಲ್ಲಿ ಇಲ್ಲವೇ ದೋಷಿ ಎಂದು ಘೋಷಿತನಾದಲ್ಲಿ, ಅಂತಹವರ ಡ್ರೈವಿಂಗ್ ಪರವಾನಗಿ ರದ್ದು ಪಡಿಸಲು ಜಿಲ್ಲಾಡಳಿತ ನಿರ್ಧರಿಸಿದೆ. 

ಮಹಿಳೆಯರನ್ನು ಚುಡಾಯಿಸುವುದು, ಅತ್ಯಾಚಾರ, ವರದಕ್ಷಿಣೆ ಕಿರುಕುಳ ಮುಂತಾದ ಪ್ರಕರಣಗಳಲ್ಲಿ ದೋಷಾರೋಪ ಪದೇ ಪದೇ ದಾಖಲಾದಾಗ ಅಥವಾ ದೋಷಿಯಾದಾಗ ಅಂತಹವರ ಡ್ರೈವಿಂಗ್ ಲೈಸೆನ್ಸ್ ರದ್ದುಗೊಳಿಸಲು ನಿರ್ಧಾರ ಕೈಗೊಳ್ಳಲಾಗಿದೆ.

ದೋಷಾರೋಪ ದಾಖಲಾಗಿದ್ದವರ ಆರೋಪ ಸಾಬೀತಾಗದಿದ್ದಲ್ಲಿ ಪರವಾನಗಿ ಹಿಂದಿರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿಶಾಂತ್ ವರ್ವಾಡೆ ಹೇಳಿದ್ದಾರೆ.

loader