ಎಸ್'ಬಿಐ ಸಿಬ್ಬಂದಿ ಇನ್ಮುಂದೆ ಜೀನ್ಸ್ ಹಾಕುವಂತಿಲ್ಲ!

First Published 10, Jan 2018, 10:36 AM IST
Dress Code to SBL Staff
Highlights

ಭಾರತೀಯ ಸ್ಟೇಟ್ ಬ್ಯಾಂಕ್, ತನ್ನ  ಸಿಬ್ಬಂದಿಗೆ ವಸ್ತ್ರಸಂಹಿತೆ  ಜಾರಿಗೊಳಿಸಿದೆ.

ನವದೆಹಲಿ (ಜ.10): ಭಾರತೀಯ ಸ್ಟೇಟ್ ಬ್ಯಾಂಕ್, ತನ್ನ  ಸಿಬ್ಬಂದಿಗೆ ವಸ್ತ್ರಸಂಹಿತೆ  ಜಾರಿಗೊಳಿಸಿದೆ.

ಪುರುಷ ಸಿಬ್ಬಂದಿಯು ಸ್ವಚ್ಛವಾದ ಶೂ ಧರಿಸಬೇಕು. ಚಪ್ಪಲಿ ಧರಿಸಕೂಡದು. ಟೀಶರ್ಟ್, ಜೀನ್ಸ್, ಸ್ಪೋರ್ಟ್ಸ್ ಶೂಗಳನ್ನು ಧರಿಸುವಂತಿಲ್ಲ. ಹಿರಿಯ ಸಿಬ್ಬಂದಿ ಅಚ್ಚುಕಟ್ಟಾದ ಫಾರ್ಮಲ್ ದಿರಿಸುಗಳನ್ನು ಧರಿಸಬೇಕು. ಇನ್ನು ಹಿರಿಯ ಮಹಿಳಾ  ಸಿಬ್ಬಂದಿಯು ಭಾರತೀಯ ಶೈಲಿ ಅಥವಾ ಪಾಶ್ಚಾತ್ಯ ಶೈಲಿಯ ಫಾರ್ಮಲ್  ಉಡುಪು ಧರಿಸಿರಬೇಕು ಎಂದು ಸೂಚಿಸಲಾಗಿದೆ.

‘ಗಡ್ಡ ಬಿಟ್ಟುಕೊಂಡು, ಬೇಕಾಬಿಟ್ಟಿಯಾಗಿ ಕೂದಲು  ಬಿಟ್ಟುಕೊಂಡು ಆಫೀಸಿಗೆ  ಬರಬಾರದು. ಬೆವರಿನ ವಾಸನೆ ಬರುವಂತೆ ಕಚೇರಿಗೆ ಆಗಮಿಸಕೂಡದು. ಬೂಟುಗಳು ಕೊಳೆಯಾಗಿರುವಂತಿಲ್ಲ. ಶೂ ಮತ್ತು ಬೆಲ್ಟ್ ಒಂದೇ  ಬಣ್ಣದ್ದಾಗಿರಬೇಕು. ಪ್ಯಾಂಟ್ ಬಣ್ಣಕ್ಕೆ  ಒಪ್ಪುವ ಸಾಕ್ಸ್ ಇರಬೇಕು. ಪ್ಲೇನ್ ಶರ್ಟ್ ಆಗಿದ್ದರೆ ಡಿಸೈನ್ ಟೈ ಇರಬೇಕು. ಚಕ್  ಶರ್ಟ್ ಇದ್ದರೆ ಪ್ಲೇನ್ ಟೈ ಇರಬೇಕು ಎಂದು ಸೂಚಿಸಲಾಗಿದೆ.

 

loader