ನಿರ್ಭಯಾ ದೋಷಿ ಪರ ವಕೀಲರಿಗೆ ಛೀಮಾರಿ: ರೇಪಿಸ್ಟ್‌ಗಳಿಗೆ ವಾರದ ಗಡುವು

ಗಲ್ಲು ಶಿಕ್ಷೆ ಮುಂದೂಡಲು ನಾನಾ ತಂತ್ರಗಳನ್ನು ಅನುಸರಿಸುತ್ತಿರುವ ನಿರ್ಭಯಾ ದೋಷಿಗಳಿಗೆ ಮತ್ತೊಂದು ಹಿನ್ನಡೆಯಾಗಿದೆ. ಒಂದರ ಬಳಿಕ ಮತ್ತೊಂದರಂತೆ ಸಲ್ಲಿಸಿದ ಎಲ್ಲಾ ಕ್ಯುರೇಟಿವ್ ಅರ್ಜಿಗಳು ವಜಾಗೊಳ್ಳುತ್ತಿರುವ ಬೆನ್ನಲ್ಲೇ, ದೆಹಲಿ ಹೈಕೋರ್ಟ್ ದೋಷಿ ಪರ ವಾದಿಸುತ್ತಿರುವ ವಕೀಲರಿಗೆ ಛೀಮಾರಿ ಹಾಕಿದೆ

ರಾಮ ಮಂದಿರಕ್ಕೆ ಸಮಿತಿ: ಸದನದಲ್ಲೇ ಪ್ರಧಾನಿ ಮೋದಿ ಘೋಷಣೆ!

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಸಮಿತಿ ರಚನೆ ಮಾಡುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದಾರೆ. ಸುಪ್ರೀಂಕೋರ್ಟ್ ಆದೇಶದಂತೆ ಅಯೋಧ್ಯೆಯಲ್ಲಿ ಶೀಘ್ರದಲ್ಲೇ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭಿಸಲಾಗುವುದು ಎಂದು ಹೇಳಿದರು.

ತಾಯಿಯನ್ನೇ ಕೊಂದು ಲವರ್ ಜೊತೆ ಎಸ್ಕೇಪ್ ಆಗಿದ್ದ ಅಮೃತಾ ಅರೆಸ್ಟ್!

ಮೈ ತುಂಬಾ ಸಾಲ ಮಾಡಿಕೊಂಡಿದ್ದೇನೆಂದು ಸುಳ್ಳು ಹೇಳಿ, ತಾಯಿಯನ್ನು ಕೊಂದು ಪ್ರಿಯಕರನೊಂದಿಗೆ ಪರತಾರಿಯಾಗಿದ್ದ ಬೆಂಗಳೂರಿನ ಮಹಿಳಾ ಟೆಕ್ಕಿ ಅಮೃತಾ ಕೊನೆಗೂ ಪೊಲೀಸರ ಬಲೆಯಲ್ಲಿ ಸಿಕ್ಕಿ ಬಿದ್ದಿದ್ದಾಳೆ. ಬೆಂಗಳೂರಿನಿಂದ ಹೈದರಾಬಾದ್ ಗೆ ಟಿಕೆಟ್ ಬುಕ್ ಮಾಡಿ ಎಸ್ಕೇಪ್ ಆಗಿದ್ದ ಅಮೃತಾ ಹಾಗೂ ಆಕೆಯ ಪ್ರಿಯಕರ ಶ್ರೀಧರ್ ರಾವ್ ನನ್ನು ಅಂಡಮಾನ್ ನಿಕೋಬಾರ್ ನ್ಲಲಿ ಪೊಲೀಸರು ಬಂಧಿಸಿದ್ದಾರೆ.

ಸೆಕ್ಸ್‌ಗೆ ಸಹಕರಿಸದ ಚಿಕ್ಕಮ್ಮನನ್ನೇ ಕೊಂದ ಕಾಮುಕ..!

ಕುಡಿದು ಬಂದಾಗ ಲೈಂಗಿಕ ಕ್ರಿಯೆಗೆ ಸಹಕರಿಸದ ಚಿಕ್ಕಮ್ಮನನ್ನು ಕೊಂದಿರುವ ಘಟನೆ ಬೆಂಗಳೂರಿನ ಹೊರವಲಯ ಬನ್ನೇರುಘಟ್ಟದ ಬಳಿ ನಡೆದಿದೆ. ಕುಡಿದು ಬಂದಿದ್ದ ಕಾಮುಕ ಲೈಂಗಿಕ ಕ್ರಿಯೆಗೆ ಸಹಕರಿಸದ ಚಿಕ್ಕಮ್ಮನನ್ನು ಕೊಂದೇ ಬಿಟ್ಟಿದ್ದಾನೆ.

ರಾಸ್ ಟೇಲರ್ ಶತಕ: ಟೀಂ ಇಂಡಿಯಾಗೆ ಸೋಲಿನ ಆಘಾತ..!

ಅನುಭವಿ ಬ್ಯಾಟ್ಸ್‌ಮನ್ ರಾಸ್ ಟೇಲರ್(108) ಆಕರ್ಷಕ ಅಜೇಯ ಶತಕ ಹಾಗೂ ಹೆನ್ರಿ ನಿಕೋಲಸ್(78), ನಾಯಕ ಟಾಮ್ ಲಾಥಮ್(69) ಸಮಯೋಚಿತ ಅರ್ಧಶತಕಗಳ ನೆರವಿನಿಂದ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ 4 ವಿಕೆಟ್‌ಗಳ ಸುಲಭ ಜಯ ದಾಖಲಿಸಿದೆ. ಈ ಮೂಲಕ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಕಿವೀಸ್ 1-0 ಮುನ್ನಡೆ ಸಾಧಿಸಿದೆ.

ಅಣ್ಣಾವ್ರ ಮೇಣದ ಪ್ರತಿಮೆಗೆ ಆಗ್ರಹಿಸಿದ ಹರಿಪ್ರಿಯಾ..!

ಲಂಡನ್ ನ ಟುಸ್ಸಾಡ್ನಲ್ಲಿರುವ ಮೇಣದ ಮ್ಯೂಸಿಯಂ ದೇಶ ವಿದೇಶಗಳಲ್ಲಿ ಜನಪ್ರಿಯ. ಅಲ್ಲಿ ಬಾಲಿವುಡ್ ತಾರೆಗಳು ಸೇರಿದಂತೆ ಬೇರೆ ರಾಜ್ಯದ ಒಂದಷ್ಟು ಸಿನಿಮಾ, ಕ್ರೀಡಾ ಮಂದಿಯ ಪ್ರತಿಮೆಗಳಿವೆ. ಆದರೆ ನಮ್ಮ ಕನ್ನಡದ ಮೇರುನಟ ಡಾ.ರಾಜ್ ಅವರ ಪ್ರತಿಮೆ ಏಕಿಲ್ಲ ಎನ್ನುವುದು ನಟಿ ಹರಿಪ್ರಿಯಾ ಅವರ ಪ್ರಶ್ನೆ.

ಕೇಂದ್ರದಿಂದ ಲಾಟರಿ: GST ಬಿಲ್‌ ಕೇಳಿ ಪಡೆಯಿರಿ, 1 ಕೋಟಿ ರು. ಬಹುಮಾನ ಗೆಲ್ಲಿ

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹದಲ್ಲಿ ಆಗುತ್ತಿರುವ ಸೋರಿಕೆ ತಡೆಗೆ ಕೇಂದ್ರ ಸರ್ಕಾರ ವಿಶಿಷ್ಟದಾರಿಯೊಂದನ್ನು ಹುಡುಕಲು ಮುಂದಾಗಿದೆ. ಖರೀದಿ ಪ್ರಕ್ರಿಯೆ ವೇಳೆ ಜಿಎಸ್‌ಟಿ ಬಿಲ್‌ ಪಡೆಯುವಂತೆ ಗ್ರಾಹಕರನ್ನು ಪ್ರೋತ್ಸಾಹಿಸಲು, ಬಿಲ್‌ ಪಡೆದವರಿಗಾಗಿ ಲಾಟರಿ ಯೋಜನೆಯೊಂದನ್ನು ಪ್ರಕಟಿಸಲು ಸಜ್ಜಾಗುತ್ತಿದೆ. ವಿಜೇತರಿಗೆ 10 ಲಕ್ಷ ರು.ನಿಂದ 1 ಕೋಟಿ ರು.ವರೆಗೂ ಬಹುಮಾನ ನೀಡಲು ಉದ್ದೇಶಿಸಿದೆ.

ಕಲಬುರಗಿ ಸಾಹಿತ್ಯ ಸಮ್ಮೇಳನ: ಮಧುವಣಗಿತ್ತಿಯಂತೆ ಸಿಂಗಾರಗೊಂಡ ಬಿಸಿಲ ನಗರಿ

ಬರೋಬ್ಬರಿ 33 ವರ್ಷಗಳ ಬಳಿಕ ಕಲಬುರಗಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಮ್ಮೇಳನದಲ್ಲಿ ದೀಪ ಬೆಳಗಿಸುವ ಮೂಲಕ ಕನ್ನಡ ಸಾಹಿತ್ಯ ಜಾತ್ರೆಗೆ ಚಾಲನೆ ನೀಡಿದ್ದಾರೆ. ಫೆ. 5,6, ಹಾಗೂ 7 ರವರೆಗೆ ಸಮ್ಮೇಳನ ನಡೆಯಲಿದೆ. ಕಲಬುರಗಿ ನಗರ ಅಕ್ಷರಶಃ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ. 

ಕಿಯಾ ಸೊನೆಟ್ ಕಾರು ಅನಾವರಣ; ಮಾರುತಿ ಬ್ರೆಜಾ, ನೆಕ್ಸಾನ್‌ಗೆ ಪೈಪೋಟಿ!

ಸಬ್‌ಕಾಂಪಾಕ್ಟ್ SUV ಕಾರುಗಳಿಗೆ ಭಾರತದಲ್ಲಿ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಪೈಪೋಟಿ ಕೂಡ ಹೆಚ್ಚಾಗಿದೆ. ಮಾರುತಿ ಬ್ರೆಜಾ, ಮಹೀಂದ್ರ XUV300, ಟಾಟಾ ನೆಕ್ಸಾನ್ ಸೇರಿದಂತೆ ಹಲವು SUV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಕಿಯಾ ಮೋಟಾರ್ಸ್, ನೂತನ ಸೊನೆಟ್ ಕಾನ್ಸೆಪ್ಟ್ ಕಾರು ಅನಾವರಣ ಮಾಡಿದೆ. ಸೆಲ್ಟೋಸ್ ಕಾರಿನ ಬಳಿಕ ಇದೀಗ ಸೊನೆಟ್ ದಾಖಲೆ ಬರೆಯುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ.

ರಾಕಿಂಗ್ ಲೈಫ್ ನಲ್ಲಿ ಇದು ಎಂದೂ ಮರೆಯದ ಸಿನಿಮಾ

ಯಶ್ - ರಾಧಿಕಾ ಅಭಿನಯದ ಬ್ಲಾಕ್ ಬಸ್ಟರ್ 'ಮಿಸ್ಟರ್ ಅಂಡ್ ಮಿಸೆಸ್ ರಾಮಚಾರಿ' ಸಿನಿಮಾ ಶುರುವಾಗಿದ್ದೇ ಇಂಟ್ರೆಸ್ಟಿಂಗ್.  ಆನ್ ಸ್ಕ್ರೀನ್ ಹಾಗೂ ಆಫ್ ಸ್ಕ್ರೀನ್ ನಲ್ಲಿ ಆಲ್ ಟೈಂ ಸಕ್ಸಸ್ ಜೋಡಿ ಅಂದ್ರೆ ರಾಕಿಂಗ್ ಜೋಡಿ. ಸಿನಿಮಾಗೂ ಸೈ, ಪರ್ಸನಲ್ ಲೈಫ್ ಗೂ ಜೈ ಅನ್ನೋ ಇವರಿಬ್ಬರು ಮಾಡಿರೋ ಎಲ್ಲಾ ಸಿನಿಮಾಗಳು ಸೂಪರ್ ಹಿಟ್. ಅದ್ರಲ್ಲೂ ಇಬ್ಬರೂ ನ್ಯಾಚುರಲ್ ಆಗಿ ನಟಿಸಿರೋ 'ಮಿಸ್ಟರ್ ಅಂಡ್ ಮಿಸೆಸ್ ರಾಮಚಾರಿ'.  ಈ ಚಿತ್ರ ಯಶ್ ಲೈಫ್ ನಲ್ಲಿ ಸ್ಪೆಷಲ್ ಚಿತ್ರವಂತೆ.