ನವದೆಹಲಿ[ಫೆ.05]: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹದಲ್ಲಿ ಆಗುತ್ತಿರುವ ಸೋರಿಕೆ ತಡೆಗೆ ಕೇಂದ್ರ ಸರ್ಕಾರ ವಿಶಿಷ್ಟದಾರಿಯೊಂದನ್ನು ಹುಡುಕಲು ಮುಂದಾಗಿದೆ. ಖರೀದಿ ಪ್ರಕ್ರಿಯೆ ವೇಳೆ ಜಿಎಸ್‌ಟಿ ಬಿಲ್‌ ಪಡೆಯುವಂತೆ ಗ್ರಾಹಕರನ್ನು ಪ್ರೋತ್ಸಾಹಿಸಲು, ಬಿಲ್‌ ಪಡೆದವರಿಗಾಗಿ ಲಾಟರಿ ಯೋಜನೆಯೊಂದನ್ನು ಪ್ರಕಟಿಸಲು ಸಜ್ಜಾಗುತ್ತಿದೆ. ವಿಜೇತರಿಗೆ 10 ಲಕ್ಷ ರು.ನಿಂದ 1 ಕೋಟಿ ರು.ವರೆಗೂ ಬಹುಮಾನ ನೀಡಲು ಉದ್ದೇಶಿಸಿದೆ.

ಭವಿಷ್ಯ ನಿಧಿ, ಪಿಂಚಣಿ ಮೇಲೂ ತೆರಿಗೆ: ಟ್ಯಾಕ್ಸ್ ಸಂಗ್ರಹಕ್ಕೆ ಕೇಂದ್ರದ ಹೊಸ ಮಾರ್ಗ!

ಈ ಕುರಿತ ಪ್ರಸ್ತಾವವನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅಧ್ಯಕ್ಷತೆಯಲ್ಲಿ ರಾಜ್ಯಗಳ ಹಣಕಾಸು ಸಚಿವರನ್ನು ಒಳಗೊಂಡ ಜಿಎಸ್‌ಟಿ ಮಂಡಳಿ ಸಭೆ ಶೀಘ್ರದಲ್ಲೇ ಪರಿಶೀಲಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ.

ಹೊಸ ಲಾಟರಿ ಯೋಜನೆಯೊಂದನ್ನು ರೂಪಿಸಿದ್ದೇವೆ. ಜಿಎಸ್‌ಟಿ ಅಡಿ ಪಡೆಯುವ ಪ್ರತಿ ಬಿಲ್‌ಗೂ ಲಾಟರಿ ಗೆಲ್ಲುವ ಅವಕಾಶ ಇರುತ್ತದೆ. ತೆರಿಗೆ ಪಾವತಿಸಲು ಗ್ರಾಹಕರಿಗೆ ಇದು ಪ್ರೋತ್ಸಾಹಕವಾಗಿ ಕೆಲಸ ಮಾಡಲಿದೆ. 1 ಕೋಟಿ ಅಥವಾ 10 ಲಕ್ಷ ರು. ಗೆಲ್ಲುವ ಅವಕಾಶ ಇರುವ ಕಾರಣದಿಂದ, ಶೇ.28ರಷ್ಟುತೆರಿಗೆಯನ್ನು ಗ್ರಾಹಕರು ಉಳಿಸಲು ಬಯಸುವುದಿಲ್ಲ ಎಂದು ಕಾರ್ಯಕ್ರಮವೊಂದರಲ್ಲಿ ಕೇಂದ್ರೀಯ ಪರೋಕ್ಷ ತೆರಿಗೆ ಹಾಗೂ ಕಸ್ಟಮ್ಸ್‌ ಮಂಡಳಿ ಸದಸ್ಯ ಜಾನ್‌ ಜೋಸೆಫ್‌ ಅವರು ತಿಳಿಸಿದ್ದಾರೆ.

ದಿನವೊಂದಕ್ಕೆ 10 ಸಾವಿರಕ್ಕಿಂತ ಹೆಚ್ಚು ನಗದು ಪಾವತಿ ನಿಷಿದ್ಧ!

ಈಗಿರುವ ಯೋಜನೆಯ ಪ್ರಕಾರ, ಪ್ರತಿ ಬಿಲ್‌ ಅನ್ನು ವೆಬ್‌ಸೈಟ್‌ವೊಂದಕ್ಕೆ ಅಪ್‌ಲೋಡ್‌ ಮಾಡಲಾಗುತ್ತದೆ. ಸ್ವಯಂಚಾಲಿತವಾಗಿ ಡ್ರಾ ಆಗಲಿದೆ. ವಿಜೇತರಿಗೆ ಬಹುಮಾನ ಬಂದಿರುವುದನ್ನು ತಿಳಿಸಲಾಗುತ್ತದೆ.

ಕನಿಷ್ಠ ಎಷ್ಟುಮೊತ್ತದ ಬಿಲ್‌ಗಳನ್ನು ಲಾಟರಿ ಪ್ರಕ್ರಿಯೆಗೆ ಸೇರಿಸಬೇಕು ಎಂಬುದನ್ನು ಜಿಎಸ್‌ಟಿ ಮಂಡಳಿ ಸಭೆ ನಿರ್ಧರಿಸುತ್ತದೆ. ಗ್ರಾಹಕ ಹಿತರಕ್ಷಣಾ ನಿಧಿಯನ್ನು ಬಳಸಿ ಲಾಟರಿಯಡಿ ಬಹುಮಾನ ನೀಡಲಾಗುತ್ತದೆ ಎಂದು ಹೇಳಲಾಗಿದೆ. ಲಾಭ ನಿಗ್ರಹ ಕಾರ್ಯಾಚರಣೆ ವೇಳೆ ಗಳಿಸುವ ಹಣವನ್ನು ಈ ನಿಧಿಗೆ ಜಮೆ ಮಾಡಲಾಗಿರುತ್ತದೆ.

ಫೆಬ್ರವರಿ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ ಮಾಡಿ