ನಿರ್ಭಯಾ ದೋಷಿ ಪರ ವಕೀಲರಿಗೆ ಛೀಮಾರಿ: ರೇಪಿಸ್ಟ್‌ಗಳಿಗೆ ವಾರದ ಗಡುವು

ನಿರ್ಭಯಾ ಹಂತಕರಿಗೆ 1 ವಾರದ ಗಡುವು| ದೋಷಿ ಪರ ವಕೀಲರಿಗೆ ದೆಹಲಿ ಹೈಕೋರ್ಟ್ ಛೀಮಾರಿ| ಒಂದು ವಾರದೊಳಗೆ ಅರ್ಜಿ ಸಲ್ಲಿಸದಿದ್ದರೆ ಮುಂದೆ ಆಯ್ಕೆ ಇಲ್ಲ

Nirbhaya Convicts Have A Week To Exhaust Legal Remedies Against Hanging

ನವದೆಹಲಿ[ಫೆ.05]: ಗಲ್ಲು ಶಿಕ್ಷೆ ಮುಂದೂಡಲು ನಾನಾ ತಂತ್ರಗಳನ್ನು ಅನುಸರಿಸುತ್ತಿರುವ ನಿರ್ಭಯಾ ದೋಷಿಗಳಿಗೆ ಮತ್ತೊಂದು ಹಿನ್ನಡೆಯಾಗಿದೆ. ಒಂದರ ಬಳಿಕ ಮತ್ತೊಂದರಂತೆ ಸಲ್ಲಿಸಿದ ಎಲ್ಲಾ ಕ್ಯುರೇಟಿವ್ ಅರ್ಜಿಗಳು ವಜಾಗೊಳ್ಳುತ್ತಿರುವ ಬೆನ್ನಲ್ಲೇ, ದೆಹಲಿ ಹೈಕೋರ್ಟ್ ದೋಷಿ ಪರ ವಾದಿಸುತ್ತಿರುವ ವಕೀಲರಿಗೆ ಛೀಮಾರಿ ಹಾಕಿದೆ.

"

ಹೌದು 2012ರ ಡಿಸೆಂಬರ್‌ನಲ್ಲಿ ದೆಹಲಿಯಲ್ಲಿ ನಡೆದಿದ್ದ, ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಈ ಘೋರ ಕೃತ್ಯ ನಡೆದು 7 ವರ್ಷ ಉರುಳಿದರೂ ನಿರ್ಭಯಾ ಅತ್ಯಾಚಾಋಇಗಳಿಗೆ ಶಿಕ್ಷೆಯಾಗಿಲ್ಲ. ಗಲ್ಲು ಶಿಕ್ಷೆ ನಿಗಧಿಯಾಗಿದ್ದರೂ, ದೋಷಿಗಳು ಕಾನೂನನ್ನೇ ದಾಳವಾಗಿಸಿಕೊಂಡು ಗಲ್ಲಿನಿಂದ ಪಾರಾಗುವ ಯತ್ನ ನಡೆಸುತ್ತಿದ್ದಾರೆ. ನಿರ್ಭಯಾ ತಾಯಿ ತನ್ನ ಮಗಳಿಗೆ ನ್ಯಾಯ ಸಿಗಲಿ ಎಂಬ ಆಶಯದಿಂದ ನ್ಯಾಯಾಲಯಕ್ಕೆ ಅಲೆಯುತ್ತಿದ್ದಾರೆ. ಆದರೀಗ ಪ್ರಕರಣ ಕೊನೆಯ ಹಂತ ತಲುಪಿದ್ದು, ಗಲ್ಲು ಶಿಕ್ಷೆಗೆ ಗಡುವು ಫಿಕ್ಸ್ ಆಗಲಾರಂಬಿಸಿದೆ. ಹೀಗಿರುವಾಗ ದೋಷಿಗಳು ಕೊನೆಯ ಹಂತದ ಪ್ರಯತ್ನ ನಡೆಸುತ್ತಿದ್ದು, ಒಂದಾದ ಬಳಿಕ ಮತ್ತೊಂದರಂತೆ ಕ್ಯುರೇಟಿವ್ ಅರ್ಜಿಗಳನ್ನು ಸಲ್ಲಿಸುತ್ತಿದ್ದು, ವಜಾಗೊಳ್ಳುತ್ತಿವೆ.

ಆದರೀಗ ದೋಷಿಗಳ ಈ ನಡೆಯಿಂದ ಬೇಸತ್ತ ದೆಹಲಿ ಹೈಕೋರ್ಟ್ ವರ ಪರ ವಾದಿಸುತ್ತಿರುವ ವಕೀಲರಿಗೆ ಛೀಮಾರಿ ಹಾಕಿದೆ. ಅಲ್ಲದೇ 1 ವಾರದೊಳಗೆ ಯಾವ, ಯಾವ ಅರ್ಜಿ ಸಲ್ಲಿಸಬೇಕೋ ಅವೆಲ್ಲವನ್ನೂ ಸಲ್ಲಿಸುವಂತೆ ಗಡುವು ನೀಡಿದೆ. ಬಳಿಕ ಈ ನಾಲ್ವರನ್ನೂ ಒಟ್ಟಾಗಿ ಗಲ್ಲಿಗೇರಿಸುವಂತೆ ಹೈಕೋರ್ಟ್ ಆದೇಶಿಸಿದೆ. ಇದರಿಂದ ದೋಷಿಗಳಿಗೆ ತೀವ್ರ ಹಿನ್ನಡೆಯಾಗಿದೆ.

ವಿಳಂಬ ತಂತ್ರ ಅನುಸರಿಸುತ್ತಿರುವ ದೋಷಿಗಳು ಇನ್ನೊಂದು ವಾರದೊಳಗೆ ತಮ್ಮೆಲ್ಲಾ ಅರ್ಜಿಗಳನ್ನು ಸಲ್ಲಿಸಲೇಬೇಕು. ಇದಾದ ಬಳಿಕ ಯಾವುದೇ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ. ಇನ್ನು ದೋಷಿಗಳು ಸಲ್ಲಿಸಿರುವ ಅರ್ಜಿ ಪುರಸ್ಕರಿಸಲ್ಪಟ್ಟರಷ್ಟೇ ಗಲ್ಲು ಮುಂದೂಡುವ ಅವಕಾಶ ಸಿಗಲಿದೆ. ಒಂದು ವೇಳೆ ವಜಾಗೊಂಡರೆ ಒಂದು ವಾಋದ ಬಳಿಕ ಹತ್ಯಾಚಾರಿಗಳಿಗೆ ಡೆತ್ ವಾರಂಟ್ ಹೊರಡಿಸಿ ೊಂದೇ ದಿನ ನಾಲ್ವರೂ ಹಂತಕರಿಗೆ ಗಲ್ಲಾಗಲಿದೆ.

ತೀರ್ಪು -1-  ನಿರ್ಭಯಾ ಹತ್ಯಾಚಾರಿಗಳಿಗೆ ಅರ್ಜಿ ಸಲ್ಲಿಸಲು 1 ವಾರದ ಅಂತಿಮ ಗಡುವು

ತೀರ್ಪು- 2- ಅತ್ಯಾಚಾರಿಗಳನ್ನು ಗಲ್ಲಿಗೇರಿಸುವ ಗಡುವು ಮತ್ತೆ ವಿಸ್ತರಿಸುವುದಿಲ್ಲ 

ತೀರ್ಪು- 3- ನಾಲ್ವರೂ ಅಪರಾಧಿಗಳನ್ನು ಒಂದೇ ಬಾರಿಗೆ ಗಲ್ಲಿಗೇರಿಸಬೇಕು  

ತೀರ್ಪು- 4 - 7 ದಿನದೊಳಗೆ ಅಪರಾಧಿಗಳು ಯಾವ, ಯಾವ ಅರ್ಜಿ ಸಲ್ಲಿಸಬೇಕೋ ಸಲ್ಲಿಸಲಿ 

ತೀರ್ಪು- 5- ಗಲ್ಲು ಶಿಕ್ಷೆ ವಿಳಂಬ ತಂತ್ರದ ವಿರುದ್ಧ ಗರಂ, ಗಲ್ಲುಶಿಕ್ಷೆ ವಿಳಂಬಕ್ಕೆ ಅಧಿಕಾರಿಗಳೂ ಕಾರಣ 

ತೀರ್ಪು -6- ದೇಶವನ್ನೇ ಬೆಚ್ಚಿಬೀಳಿಸಿದ ಪ್ರಕರಣದ ದೋಷಿಗಳು, ಕ್ಷಮಾದಾನ ಅರ್ಜಿ ಮೂಲಕ ವಿಳಂಬ ತಂತ್ರ ಸರಿಯಲ್ಲ 

'ನಿರ್ಭಯಾ ಕೇಸ್ ದೋಷಿಗಳಿಗೆ ಗಲ್ಲು ವಿಧಿಸಲು ಗಡಿಬಿಡಿ ಏಕೆ?'

ಫೆಬ್ರವರಿ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ ಮಾಡಿ

Latest Videos
Follow Us:
Download App:
  • android
  • ios