ಬೆಂಗಳೂರು (ಸೆ.26): ಕತ್ತು ಕುಯ್ದು ಅತ್ತೆ, ಸೊಸೆ ಕೊಲೆ ಮಾಡಿರುವ ಘಟನೆ ಬೆಂಗಳೂರು ವಸಂತನಗರದ ಮುನೇಶ್ವರ ದೇವಸ್ಥಾನ ಬಳಿಯ ಮನೆವೊಂದರಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮನೆಯಲ್ಲಿ ಯಾರು ಇಲ್ಲದ ವೇಳೆ ಆಗಮಿಸಿದ ದುಷ್ಕರ್ಮಿಗಳು ಮನೆಯಲ್ಲಿದ್ದ ಅತ್ತೆ, ಸೊಸೆ ಮೇಲೆ ಹಲ್ಲೆ ಮಾಡಿ, ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಕೊಲೆಯಾದವರನ್ನು 50 ವರ್ಷ ಸಂತೋಷಿ ಭಾಯಿ, 30 ವರ್ಷ ಸೊಸೆ ಲತಾ ಎಂದು ತಿಳಿದುಬಂದಿದ್ದು, ಕೊಲೆಯಾದ ಇಬ್ಬರು ಕೂಡ ರಾಜಸ್ಥಾ ಮೂಲದವರಾಗಿದ್ದಾರೆ. 

ಘಟನೆ ವಿಚಾರ ತಿಳಿದು ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ಚರಣ್ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸದ್ಯ ಹೈಗ್ರೌಂಡ್ಸ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.