ನವದೆಹಲಿ(ಜೂ. 01)   ಡಿಜಿಟಲ್ ಮಾದರಿಯಲ್ಲಿ ಪ್ರಸಾರವಾಗುವ ವೆಬ್ ಸೀರಿಸ್ ಮತ್ತು ಶೋ ಗಳಿಗೆ ಸೆನ್ಸಾರ್ ಹೇರಿಕೆ ಮಾಡಬಾರದು.  ಯಾರು ವೀಕ್ಷಣೆ ಮಾಡುತ್ತಾರೋ ಅವರೊಗೆ ವಯಸ್ಸಿನ ಮಿತಿ ನಿಗದಿ ಮಾಡಿಕೊಳ್ಳುವಂತಹ ವ್ಯವಸ್ಥೆ ಮಾಡಬೇಕು ಎಂದು ಹಲವು ಕಲಾವಿದರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಗ್ನತೆ, ಹಿಂಸಾತ್ಮಕತೆ, ಭಾಷೆಯ ಬಳಕೆ ಮೇಲೆ ನಿರ್ಬಂಧ ವಿಧಿಸಲು ಸುಪ್ರೀಂಕೋರ್ಟ್  ಕೇಂದ್ರ ಸರಕಾರಕ್ಕೆ ಸೂಚಿಸಿತ್ತು.  ಇದಾದ ಮೇಲೆ ವೆಬ್ ಸೀರಿಸ್ ಮೇಲೆಯೂ ಸೆನ್ಸಾರ್ ಹೇರಿಕೆಯ ಮಾತು ಕೇಳಿ ಬಂದಿದೆ.

ಈ ಬಗ್ಗೆ ಚಿತ್ರನಿರ್ಮಾಪಕ ಸಚಿನ್ ಯಾರ್ಡಿ ವಿರೋಧ ವ್ಯಕ್ತಪಡಿಸಿದ್ದು,  ಕಲಾವಿದರಿಗೆ  ನಿರ್ಬಂಧ ವಿಧಿಸದೇ ಸ್ವತಂತ್ರ ನೀಡಬೇಕು ಎಂದಿದ್ದಾರೆ. ಪ್ರತಿಯೊಬ್ಬರಿಗೂ ಕೂಡ ತಮ್ಮದೇ ಆದ ಐಡಿಯಾಗಳಿರುತ್ತದೆ. ಆದ್ದರಿಂದ ಅವರ ಕೌಶಲ್ಯಕ್ಕೆ ನಿಯಮ ರೂಪಿಸುವುದು ಸೂಕ್ತವಲ್ಲ ಎಂದಿದ್ದಾರೆ. 

ತೆಗಳಿದರೂ ಕದ್ದು ಮುಚ್ಚಿ ನೋಡಿದ ಭಾರತೀಯರು

ಇನ್ನು ನಟಿ ಕುಬ್ರಾ ಸೇಠ್ ಕೂಡ ಸೆನ್ಸಾರ್ ಶಿಪ್ ವಿಧಿಸುವುದು ಕಲಾವಿದರನ್ನು ತಡೆದಂತೆ ಸರಿ, ಕೌಶಲ್ಯ ಪ್ರದರ್ಶನಕ್ಕೆ ಅಡ್ಡಿ ಮಾಡಿದಂತೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಯಾವುದೇ ವಿಚಾರವನ್ನು ಪ್ರಸ್ತುತಪಡಿಸಲು ಕೆಲವೊಂದು ಕೌಶಲ್ಯ ಪ್ರದರ್ಶಿಸಲೇಬೇಕಾಗುತ್ತದೆ. ಇದಕ್ಕೆ ನಿರ್ಬಂಧ ಹೇರಿದಲ್ಲಿ ಸೂಕ್ತ ರೀತಿಯಲ್ಲಿ ಜನರಿಗೆ ತಲುಪಿಸಲು ಸಾಧ್ಯವಿಲ್ಲ ಎಂದಿದ್ದಾರೆ.