Asianet Suvarna News Asianet Suvarna News

ತೆಗಳಿದರೂ ಕದ್ದು ಮುಚ್ಚಿ ನೋಡಿದ ಭಾರತೀಯರು

ಏಕ್ತಾ ಕಪೂರ್ ನಿರ್ಮಾಣದ ಎಕ್ಸ್ ಎಕ್ಸ್  ಎಕ್ಸ್ ವೆಬ್ ಸೀರೀಸ್ ಅನ್ನು  ಕೆನ್ ಘೋಷ್ ನಿರ್ದೇಶಿಸಿದ್ದು ಹಿಂದಿಯ ಕಿರುತರೆಯ ಪ್ರಮುಖ ತಾರೆಯರಾದ  ಶಾಂತನು ಮಹೇಶ್ವರಿ, ಅಂಕಿತ್ ಗೇರಾ, ರಿತ್ವಿಕ್ ಧನಂಜಯ್ ಸದೇರಿದಂತೆ ಮುಂತಾದವರು ನಟಿಸಿದ್ದಾರೆ. 

Ekta Kapoor on Un censored's Huge success
Author
Bengaluru, First Published Oct 10, 2018, 4:46 PM IST
  • Facebook
  • Twitter
  • Whatsapp

ಮುಂಬೈ[ಅ.10]: ಏಕ್ತಾ ಕಪೂರ್ ನಿರ್ಮಾಣದ  ವಿವಾದಾತ್ಮಕ ವೆಬ್ ಸೀರೀಸ್ ಚಿತ್ರ  ಎಕ್ಸ್ ಎಕ್ಸ್  ಎಕ್ಸ್  : ಅನ್ ಸೆನ್ಸಾರಡ್ ಆನ್ ಲೈನ್ ನಲ್ಲಿ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಅಭೂತಪೂರ್ವ ಯಶಸ್ಸು ಕಂಡಿದೆ. 

ಅಕ್ಟೋಬರ್ 1 ರಂದು ಬಿಡುಗಡೆಯಾಗಿದ್ದು ನಿರೀಕ್ಷೆಗೂ ಮೀರಿ ಪ್ರೇಕ್ಷಕರು ಪ್ರತಿಕ್ರಿಯೆ ನೀಡಿದ್ದಾರೆ. ಸೆಕ್ಸ್ ಬಗ್ಗೆ ಹಲವು ವಿವಾದಾತ್ಮಕ ಅಂಶಗಳಿರುವ ಈ ಚಿತ್ರವನ್ನು ಭಾರತೀಯರು ಟೀಕಿಸಿದರೂ ಹೆಚ್ಚಿನ ಸಂಖ್ಯೆಯಲ್ಲಿ ನೋಡಿದ್ದಾರೆ. ಈ ಬಗ್ಗೆ ಸಂತಸ ಹಂಚಿಕೊಂಡಿರುವ ನಿರ್ಮಾಪಕಿ ಏಕ್ತಾ ಟೀಕೆಗಳಿಗೆ ತಕ್ಕಂತೆ ಹೆಚ್ಚಿನ ಸಂಖ್ಯೆಯಲ್ಲಿ ಟಿವಿಯಲ್ಲಿ ನೋಡಿದ್ದಾರೆ. ಆಪ್ ನಲ್ಲಿ ಹೊಸ ದಾಖಲೆ ನಿರ್ಮಾಣವಾಗಿರುವುದಕ್ಕೆ ಚಿತ್ರತಂಡಕ್ಕೆ  ಧನ್ಯವಾದ ತಿಳಿಸಿದ್ದಾರೆ.

ಏಕ್ತಾ ಕಪೂರ್ ನಿರ್ಮಾಣದ ಎಕ್ಸ್ ಎಕ್ಸ್  ಎಕ್ಸ್ ವೆಬ್ ಸೀರೀಸ್ ಅನ್ನು  ಕೆನ್ ಘೋಷ್ ನಿರ್ದೇಶಿಸಿದ್ದು ಹಿಂದಿಯ ಕಿರುತರೆಯ ಪ್ರಮುಖ ತಾರೆಯರಾದ  ಶಾಂತನು ಮಹೇಶ್ವರಿ, ಅಂಕಿತ್ ಗೇರಾ, ರಿತ್ವಿಕ್ ಧನಂಜಯ್ ಸದೇರಿದಂತೆ ಮುಂತಾದವರು ನಟಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇಷ್ಟು ಪ್ರಮಾಣದಲ್ಲಿ ಯಶಸ್ಸು ಕಂಡ ವೆಬ್ ಸೀರೀಸ್ ಇದಾಗಿದೆಯಂತೆ.  ನಗರದಲ್ಲಿ ನಡೆಯುವಂತಹ  5 ಅತಿರೇಕದ ಪ್ರಚೋದನಾತ್ಮಕ ಪರಿಕಲ್ಪನೆಯನ್ನು ಚಿತ್ರ ಹೊಂದಿದೆ ಎನ್ನಲಾಗಿದೆ.

 

Follow Us:
Download App:
  • android
  • ios