ವಾಷಿಂಗ್ಟನ್(ಮಾ.21): ಭಾರತದ ಮೇಲೆ ಮತ್ತೊಂದು ಉಗ್ರ ದಾಳಿ ನಡಿದಿದ್ದೇ ಆದರೆ ಪಾಕಿಸ್ತಾನ ಗಂಭೀರ ಪರಿಣಾಮ ಎದುರಿಸಲಿದೆ ಎಂದು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

ಭಾರತದಲ್ಲಿ ಉಗ್ರ ದಾಳಿ ನಡೆದರೇ ಪಾಕಿಸ್ತಾನ ನಿಜಕ್ಕೂ ಅತ್ಯಂತ ಕಷ್ಟಕರ ದಿನಗಳನ್ನು ಎದುರಿಸಲಿದೆ ಎಂದಿರುವ ಟ್ರಂಪ್, ಉಗ್ರರ ಶಮನ ಮಾಡುವ ನಿಟ್ಟಿನಲ್ಲಿ ಪಾಕ್ ಸರ್ಕಾರ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತದೆ ಎನ್ನುವುದು ನಾವು ಗಮನಿಸಬೇಕಿದೆ ಎಂದು ಹೇಳಿದ್ದಾರೆ.

ಅಲ್ಲದೇ ಪಾಕಿಸ್ತಾನ ಉಗ್ರರ ನಿರ್ಮೂಲನೆ ಮಾಡಲಿದೆಯೇ ಎಂಬ ತೀರ್ಮಾನಕ್ಕೆ ಈಗಲೇ ಬರುವುದು ಕಷ್ಟ ಎಂದೂ ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಟ್ರಂಪ್ ಎಚ್ಚರಿಕೆಯನ್ನು ಸಕಾರಾತ್ಮಕ ಬೆಳವಣಿಗೆ ಎಂದು ಬಣ್ಣಿಸಿರುವ ಭಾರತ, ಉಗ್ರವಾದವನ್ನು ಪೋಷಿಸುವ ರಾಷ್ಟ್ರವಾದ ಪಾಕಿಸ್ತಾನವನ್ನು ಜಾಗತಿಕವಾಗಿ ಒಂಟಿಯನ್ನಾಗಿಸುವ ಸಮಯ ಬಂದಿದೆ ಎಂದು ಅಭಿಪ್ರಾಯಪಟ್ಟಿದೆ.