ಪ್ರಧಾನಿ ಕಚೇರಿಯು ನೀಡಿರುವ ಉತ್ತರದ ಪ್ರಕಾರ, ಸಾಮಾಜಿಕ ಜಾಲತಾಣಗಳ ಹಾಗೂ ಆ್ಯಪ್ ನಿರ್ವಹಣೆಗಾಗಿ 2014ರಿಂದ ಒಂದು ನಯಾ ಪೈಸೆಯೂ ಖರ್ಚಾಗಿಲ್ಲ!

ಇಂದು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ರಾಜಕಾರಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರೂ ಒಬ್ಬರು. ಹಾಗಾದರೆ ಅವರು ಅದಕ್ಕಾಗಿ ಖಜಾನೆಯಿಂದ ಕೋಟ್ಯಾಂತರ ರೂಪಾಯಿ ವ್ಯಯಿಸುತ್ತಿದ್ದಾರೆಂದು ಭಾವಿಸಿದ್ದರೆ ನಿಮ್ಮ ಊಹೆ ತಪ್ಪು.

ಈ ಕುರಿತು ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋದಿಯಾ ಅವರು ಮಾಹಿತಿ ಹಕ್ಕಿನ ಮೂಲಕ ಪ್ರಧಾನಿ ಕಛೇರಿಗೆ ಪ್ರಶ್ನೆ ಕೇಳಿದ್ದಾರೆ.

ಪ್ರಧಾನಿ ಕಚೇರಿಯು ನೀಡಿರುವ ಉತ್ತರದ ಪ್ರಕಾರ, ಸಾಮಾಜಿಕ ಜಾಲತಾಣಗಳ ನಿರ್ವಹಣೆಗಾಗಿ 2014ರಿಂದ ಒಂದು ನಯಾ ಪೈಸೆಯೂ ಖರ್ಚಾಗಿಲ್ಲ!

ಮಾಹಿತಿಯ ಪ್ರಕಾರ ಪ್ರಧಾನಿ ಕಚೇರಿ ವತಿಯಿಂದ ಫೇಸ್’ಬುಕ್, ಟ್ವೀಟರ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಅಭಿಯಾನಗಳನ್ನು ಹಮ್ಮಿಕೊಳ್ಳಲಾಗಿಲ್ಲ.

ಪ್ರಧಾನಿಯವರ ಅಧಿಕೃತ ಮೊಬೈಲ್ ಆ್ಯಪ್ ‘PMO India’ ವನ್ನು MyGov ಹಾಗೂ ಗೂಗಲ್ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳೇ ವಿನ್ಯಾಸಗೊಳಿಸಿದ್ದಾರೆ. ವಿದ್ಯಾರ್ಥಿಗಳಿಗೆ ನಗದು ಬಹುಮಾನವನ್ನು ಕೊಡಲಾಗಿತ್ತು, ಆ ಖರ್ಚನ್ನು ಕೂಡಾ ಗೂಗಲ್ ಸಂಸ್ಥೆಯೇ ಭರಿಸಿದೆಯೆಂದು ಪ್ರಧಾನಿ ಕಛೇರಿಯು ತಿಳಿಸಿದೆ.

ಪ್ರಧಾನಿ ಕಚೇರಿ ಅಥವಾ ಸರ್ಕಾರ 'Narendra Modi' ಎಂಬ ಆ್ಯಪನ್ನು ಅಭಿವೃದ್ಧಿಪಡಿಸಿಲ್ಲ ಹಾಗೂ ಅದನ್ನು ನಿರ್ವಹಿಸುತ್ತಿಲ್ಲ ಎಂದು ಪಿಎಂಓ ಹೇಳಿದೆ.