ತಂಜಾವೂರು : ನಾಯಿ ನಿಯತ್ತಿಗಿಂತ ಮಿಗಿಲಾಗಿರುವುದು ಯಾವುದು ಇಲ್ಲ. ಮನುಷ್ಯನೊಂದಿಗೆ ಸದಾ ಸ್ನೇಹ, ನಿಯತ್ತಿನೊಂದಿಗೆ ಬದುಕುವ ಜೀವಿ ಇದು. 

ಅದೇ ರೀತಿ ತಮಿಳುನಾಡಿನಲ್ಲಿ ನಾಯಿ ನಿಯತ್ತಿಗೆ ಸಾಕ್ಷಿಯಾದ ಮನಕಲುಕುವ ಘಟನೆಯೊಂದು ನಡೆದಿದೆ. ನಾಯಿ ಹಾವಿನೊಂದಿಗೆ ಹೋರಾಡಿ ತನ್ನ ಮಾಲಿಕನ ಜೀವ ಕಾಪಾಡಿದೆ ಹಾವು ಕಡಿದಿದ್ದು, ಈ ವೇಳೆ ಹಾವಿನಿಂದ ತನ್ನ ಮಾಲೀಕರನ್ನು ಕಾಪಾಡಿದೆ. 

ತಮಿಳುನಾಡಿನ ವೆಂಗರಾಯನ ಕುಡಿಕಾಡು ಪ್ರದೇಶದ ರೈತ 50 ವರ್ಷದ ನಟರಾಜು ಬೆಳ್ಳಂಬೆಳಗ್ಗೆ ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ನಾಗರ ಹಾವೊಂದು ಸ್ಥಳದಲ್ಲಿತ್ತು.  ಹಾವು  ಹೆಡೆ ಬಿಚ್ಚಿ ನಟರಾಜನ್ ಗೆ ಕಚ್ಚಲು ಯತ್ನಿಸಿದೆ. ಈ ವೇಳೆ ತಕ್ಷಣ ನಾಯಿ ಅಡ್ಡ ಬಂದು ಬೊಗಳಲಾರಂಭಿಸಿದೆ.   

ಈ ವೇಳೆ ನಟರಾಜನ್ ಹಿಂದೆ ಸರಿದಿದ್ದು, ನಾಯಿಗೆ ಕಾವು ಕಚ್ಚಿದ್ದು, ಮಾಲೀಕನ ಕಾಪಾಡಿ ತನ್ನ ಪ್ರಾಣ ತ್ಯಾಗ ಮಾಡಿದೆ.