ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಪುತ್ರಿ ಪ್ರಿಯಾಂಕ ಗಾಂಧಿ ಮುಂಬರುವ ವಿಧಾನಸಭೆ ಚುನಾವಣಾ ಪ್ರಚಾರಕ್ಕೆ ರಾಜ್ಯಕ್ಕೆ ಬರ್ತಾರೆ ಅನ್ನೋ ಮಾತು ಕೇಳಿ ಬಂದಿತ್ತು. ಮುಂಬರುವ ಚುನಾವಣೆ ಪ್ರಚಾರಕ್ಕೆ ಪ್ರಿಯಾಂಕ ಗಾಂಧಿಯನ್ನು ರಾಜ್ಯಕ್ಕೆ ಕರೆಸಬೇಕು ಅನ್ನೋ ಚಿಂತನೆ ಸಿಎಂ ಸಿದ್ದರಾಮಯ್ಯನವರದ್ದಾಗಿದೆ. ಈ ಮೂಲಕ ಗೆಲುವಿನ ಕ್ರೆಡಿಟ್’ನ್ನು ಹೈಕಮಾಂಡ್​ಗೆ ನೀಡಲು ರಾಜ್ಯ ನಾಯಕರು ರೆಡಿಯಾಗಿದ್ದಾರೆ. ಆದರೆ ಪ್ರಿಯಾಂಕ  ಗಾಂಧಿ ರಾಜ್ಯಕ್ಕೆ ಬರೋ ವಿಚಾರವನ್ನ ಕಾಂಗ್ರೆಸ್ ಉನ್ನತ ಮೂಲಗಳು ಅಲ್ಲಗಳೆದಿದ್ದು, 2019ರ ಲೋಕಸಭೆ ಚುನಾವಣೆಗೆ ಪ್ರಿಯಾಂಕ ಗಾಂಧಿಯನ್ನು ಪರಿಚಯಿಸಲು ಹೈಕಮಾಂಡ್ ನಿರ್ಧರಿಸಿದೆ ಎನ್ನಲಾಗಿದೆ.

ಬೆಂಗಳೂರು (ಸೆ.27): ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಪುತ್ರಿ ಪ್ರಿಯಾಂಕ ಗಾಂಧಿ ಮುಂಬರುವ ವಿಧಾನಸಭೆ ಚುನಾವಣಾ ಪ್ರಚಾರಕ್ಕೆ ರಾಜ್ಯಕ್ಕೆ ಬರ್ತಾರೆ ಅನ್ನೋ ಮಾತು ಕೇಳಿ ಬಂದಿತ್ತು. ಮುಂಬರುವ ಚುನಾವಣೆ ಪ್ರಚಾರಕ್ಕೆ ಪ್ರಿಯಾಂಕ ಗಾಂಧಿಯನ್ನು ರಾಜ್ಯಕ್ಕೆ ಕರೆಸಬೇಕು ಅನ್ನೋ ಚಿಂತನೆ ಸಿಎಂ ಸಿದ್ದರಾಮಯ್ಯನವರದ್ದಾಗಿದೆ. ಈ ಮೂಲಕ ಗೆಲುವಿನ ಕ್ರೆಡಿಟ್’ನ್ನು ಹೈಕಮಾಂಡ್​ಗೆ ನೀಡಲು ರಾಜ್ಯ ನಾಯಕರು ರೆಡಿಯಾಗಿದ್ದಾರೆ. ಆದರೆ ಪ್ರಿಯಾಂಕ ಗಾಂಧಿ ರಾಜ್ಯಕ್ಕೆ ಬರೋ ವಿಚಾರವನ್ನ ಕಾಂಗ್ರೆಸ್ ಉನ್ನತ ಮೂಲಗಳು ಅಲ್ಲಗಳೆದಿದ್ದು, 2019ರ ಲೋಕಸಭೆ ಚುನಾವಣೆಗೆ ಪ್ರಿಯಾಂಕ ಗಾಂಧಿಯನ್ನು ಪರಿಚಯಿಸಲು ಹೈಕಮಾಂಡ್ ನಿರ್ಧರಿಸಿದೆ ಎನ್ನಲಾಗಿದೆ.

ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್ ರಾಷ್ಟ್ರೀಯ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಮಾಡಿ ಕಾಂಗ್ರೆಸ್​ಗೆ ಮತ್ತೇ ರಾಷ್ಟ್ರಮಟ್ಟದಲ್ಲಿ ಪುನಶ್ಚೇತನಗೊಳಿಸುವ ಉದ್ದೇಶ ಸೋನಿಯಾ ಮತ್ತು ರಾಹುಲ್ ಗಾಂಧಿಯದ್ದಾಗಿದೆ ಎಂದು ಮೂಲಗಳು ತಿಳಿಸಿವೆ.