ರಾಷ್ಟ್ರೀಯ ವೈದ್ಯಕೀಯ ಆಯೋಗ(ಎನ್‌ಎಂಸಿ) ಕರಡು ಮಸೂದೆಯಲ್ಲಿ ಕೆಲ ಅಂಶಗಳ ಬದಲಾವಣೆ ಒಪ್ಪದ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ದೇಶಾದ್ಯಂತ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಸೋಮವಾರ ಮುಷ್ಕರ ನಡೆಸಲಿದ್ದಾರೆ.

ನವದೆಹಲಿ: ರಾಷ್ಟ್ರೀಯ ವೈದ್ಯಕೀಯ ಆಯೋಗ(ಎನ್‌ಎಂಸಿ) ಕರಡು ಮಸೂದೆಯಲ್ಲಿ ಕೆಲ ಅಂಶಗಳ ಬದಲಾವಣೆ ಒಪ್ಪದ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ದೇಶಾದ್ಯಂತ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಸೋಮವಾರ ಮುಷ್ಕರ ನಡೆಸಲಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆದರೆ ಈ ಮುಷ್ಕರ ಕೇವಲ ಸಾಂಕೇತಿಕ ರೂಪದಲ್ಲಿ ಇರುತ್ತದೆ. ವೈದ್ಯರ ಬಹುತೇಕ ಬೇಡಿಕೆಯನ್ನು ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಮಾನ್ಯ ಮಾಡಿತ್ತು. ಹೀಗಾಗಿ ಅನಿರ್ದಿಷ್ಟಾವಧಿ ಮುಷ್ಕರ ಕೈಬಿಟ್ಟು ಕೇವಲ ಸಾಂಕೇತಿಕ ಮುಷ್ಕರಕ್ಕೆ ವೈದ್ಯರು ನಿರ್ಧರಿಸಿದ್ದಾರೆ.