Asianet Suvarna News Asianet Suvarna News

'ರಾಮನ ದೇವಸ್ಥಾನ ಕಟ್ಟಲು ಹೊರಟಿರೋ ಮಂದಿಗೆ ವೋಟ್ ಹಾಕ್ಬೇಡಿ'

ಪರೋಕ್ಷವಾಗಿ ಬಿಜೆಪಿಗೆ ಮತ ಹಾಕಬೇಡಿ ಎಂದು ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್ ಕರೆ ಕೊಟ್ಟಿದ್ದಾರೆ.

Do not vote for Who has Build The Rama Temple Says KS Bhagawan
Author
Bengaluru, First Published Oct 7, 2018, 3:56 PM IST
  • Facebook
  • Twitter
  • Whatsapp

ಮೈಸೂರು, [ಅ.07]: ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್ ಪರೋಕ್ಷವಾಗಿ ಬಿಜೆಪಿ ಹಾಗೂ ಮೇಲ್ ಜಾತಿ ವಿರುದ್ಧ ಹರಿಹಾಯ್ದಿದ್ದಾರೆ.

ಮೈಸೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಭಗವಾನ್, ‘ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮನುವಾದಿಗಳನ್ನ ತಿರಸ್ಕರಿಸಿ. ಅಷ್ಟೇ ಅಲ್ಲದೇ ರಾಮನ ದೇವಸ್ಥಾನ ಕಟ್ಟಲು ಹೊರಟಿರೋ ಮಂದಿಗೆ ವೋಟ್ ಹಾಕ್ಬೇಡಿ ಎಂದು ಪರೋಕ್ಷವಾಗಿ ಬಿಜೆಪಿಗೆ ಮತ ಹಾಕಬೇಡಿ ಎಂದು ಕರೆ ಕೊಟ್ಟಿದ್ದಾರೆ.

ಮಹಿಷಾ ಪರ ನಿಂತ ಭಗವಾನ್; ಭಗವಾನ್ ವಿರುದ್ಧ ತಿರುಗಿ ಬಿದ್ದ ಭಕ್ತರು!

ದೇಶದ ಮೂಲ ದೇವರಾದ ಶಿವನ ದೇವಸ್ಥಾನ ಕಟ್ಟುತ್ತಿಲ್ಲ. ಜಾತಿ, ವರ್ಣಬೇಧ ಮಾಡಿದ ರಾಮನ ದೇಗುಲ ನಿರ್ಮಿಸಲು ಹೊರಟಿದ್ದಾರೆ. ಇರುವುದು 2 ಜಾತಿ, ಜನಿವಾರ ಹಾಕಿದವರು, ಜನಿವಾರ ಹಾಕದವರು ಎಂದರು.

ಶಾಲಾ ಕಾಲೇಜುಗಳಲ್ಲಿ ಓದುವ ಇತಿಹಾಸ ಶೇ. 50ರಷ್ಟು ಸುಳ್ಳು. ಇತರ ಧರ್ಮಗಳು ಜನರನ್ನು ಸೆಳೆದರೆ, ಹಿಂದೂ ಧರ್ಮ ದೂರ ತಳ್ಳುತ್ತೆ. ಮಹಿಷಾಸುರನನ್ನು ರಾಕ್ಷಸನಂತೆ ಬಿಂಬಿಸಿದವರೇ ರಾಕ್ಷಸರು. ದೇಶದ ಮೇಲೆ 27 ಬಾರಿ ದಾಳಿಯಾದಾಗ ರಾಮ, ಚಾಮುಂಡೇಶ್ಚರಿ ಎಲ್ಲಿದ್ರು? ಎಂದು ಪ್ರಶ್ನಿಸಿದ್ದಾರೆ.
 

Follow Us:
Download App:
  • android
  • ios