ಡಿಕೆಶಿ ವಿರುದ್ಧ ಇದು ಮೂರನೇ  ದಾಳಿ

ಬೆಂಗಳೂರು(ಆ.02): ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಮೇಲೆ ಐಟಿ ದಾಳಿಯಾಗುತ್ತಿರುವುದು ಮೂರನೇ ಬಾರಿ. 2002ರಲ್ಲಿ ಕೇಂದ್ರ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಹಾಗೂ 2006ರಲ್ಲಿ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಮೈಸೂರು ಮಿನರಲ್ಸ್‌ನ ಅದಿರು ರಪ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ದಾಳಿ ನಡೆದಿತ್ತು ಎನ್ನಲಾಗಿದೆ.