ಡಿಎಸ್ ಅತೃಪ್ತರು ಕಾಂಗ್ರೆಸ್‌ಗೆ ಬರುವಿಕೆಗೆ ಕೆಲವರ ವಿರೋಧ ವಿಚಾರ‌ಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ವಿರೋದ ವ್ಯಕ್ತವಾಗುವದು ಸಹಜ. ಗೆಲ್ಲುವ ಅಭ್ಯರ್ಥಿಗಳನ್ನು ನಾವು ತೆಗೆದುಕೊಳ್ಳಬೇಕಾಗುತ್ತದೆ.ನಮಗೆ ಅಭ್ಯರ್ಥಿ ತುಂಬಾ ಮುಖ್ಯ ಆ ದೃಷ್ಟಿಯಿಂದ ಕೆಲ ತೀರ್ಮಾನ ತೆಗೆದುಕೊಳ್ಳಲಾಗಿದೆ. ಯಾರಿಗೂ ಟಿಕೆಟ್ ಕನ್ಫರ್ಮ್ ಆಗಿಲ್ಲ.
ತುಮಕೂರು(ಆ.28): ವರಪ್ರಸಾದ್ ರೆಡ್ಡಿ ಒಬ್ಬ ಕಾರ್ಪೋರೇಷನ್ ಕ್ಯಾಂಡಿಡೇಟ್. ಸೋತ ಕ್ಯಾಂಡಿಡೇಟ್ ಆತನಿಗೆ ಅಷ್ಟೊಂದು ಪ್ರಾಮುಖ್ಯತೆ ಕೊಡಬಾರದು. ಡಿಕೆಶಿ ಆಪ್ತ ಅನ್ನೋದಕ್ಕಿಂತ ಕಾಂಗ್ರೆಸ್'ನಿಂದ ಟಿಕೆಟ್ ಕೊಟ್ಟಿದ್ದೇವೆ ಅಷ್ಟೇ. ಯಾವ ಶಾಸಕರು ಹೊದರು ಸಚಿವರು ಹೊದರು ಏನು ಆಗಲ್ಲ. ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿರುತ್ತೆ. ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೆ ಎಂದು' ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಅಮಿತ್ ಶಾ ಹೇಳಿದ್ದಾರೆ ಅಂತ ಬಿಜೆಪಿ ನಾಯಕರು ಹೋರಾಟ ಮಾಡುತ್ತಿದ್ದಾರೆ. ಡಿಎಸ್ ಅತೃಪ್ತರು ಕಾಂಗ್ರೆಸ್ಗೆ ಬರುವಿಕೆಗೆ ಕೆಲವರ ವಿರೋಧ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ವಿರೋದ ವ್ಯಕ್ತವಾಗುವದು ಸಹಜ. ಗೆಲ್ಲುವ ಅಭ್ಯರ್ಥಿಗಳನ್ನು ನಾವು ತೆಗೆದುಕೊಳ್ಳಬೇಕಾಗುತ್ತದೆ.ನಮಗೆ ಅಭ್ಯರ್ಥಿ ತುಂಬಾ ಮುಖ್ಯ ಆ ದೃಷ್ಟಿಯಿಂದ ಕೆಲ ತೀರ್ಮಾನ ತೆಗೆದುಕೊಳ್ಳಲಾಗಿದೆ. ಯಾರಿಗೂ ಟಿಕೆಟ್ ಕನ್ಫರ್ಮ್ ಆಗಿಲ್ಲ. ಮುಂದಿನ ಸಿಎಂ ಅಭ್ಯರ್ಥಿ ಸಿದ್ದರಾಮಯ್ಯನವರೆ. ಈಗಾಗಲೇ ಘೋಷಣೆ ಮಾಡಲಾಗಿದೆ. ಅವರ ನಾಯಕತ್ವದಲ್ಲೇ ಮುಂದಿನ ಚುನಾವಣೆ ನಡೆಯುತ್ತದೆ ಎಂದು ಪಕ್ಷ ತೀರ್ಮಾನ ಮಾಡಿದೆ. ನನಗೆ ಇನ್ನೂ ಹೆಚ್ಚಿನ ಜವಾಬ್ದಾರಿ ಬೇಡಾ ಕೊಟ್ಟ ಖಾತೆಯನ್ನು ನಿಭಾಯಿಸುತ್ತೆನೆ. ಗೃಹ ಖಾತೆಯ ಆಕಾಂಕ್ಷಿ ನಾನಲ್ಲ ಸದ್ಯಕ್ಕೆ ನನ್ನನ್ನ ಫ್ರಿಯಾಗಿ ಬಿಟ್ಟರೆ ಸಾಕು ಎಂದು ಹೇಳಿದರು.
