ನವದೆಹಲಿ, [ಸೆ.03] : ಕಳೆದ 3 ದಿನ ವಿಚಾರಣೆ ಎದುರಿಸಿ 4ನೇ ದಿನಕ್ಕೆ ವಿಚಾರಣೆಗೆ ಹೋಗಿದ್ದ ಮಾಜಿ ಸಚಿವ, ಕನಕಪುರ ಕ್ಷೇತ್ರದ ಹಾಲಿ ಶಾಸಕ ಡಿಕೆ ಶಿವಕುಮಾರ್ ಅವರನ್ನು ಇಡಿ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ.

ಕಳೆದ ಮೂರು ದಿನಗಳಿಂದ ಇಡಿ ವಿಚಾರಣೆ ಎದುರಿಸಿರುವ ಡಿಕೆ ಶಿವಕುಮಾರ್ ಅವರನ್ನು ಮಂಗಳವಾರ 4ನೇ ದಿನವೂ ಸಹ ವಿಚಾರಣೆಗೆ ಬರುವಂತೆ ನಿನ್ನೆ [ಸೋಮವಾರ] ಸೂಚನೆ ನೀಡಿತ್ತು.

 ಅದರಂತೆ ಇಂದು [ಮಂಗಳವಾರ] ವಿಚಾರಣೆಗೆ ಡಿಕೆ ಶಿವಕುಮಾರ್ ಅವರು ನವದೆಹಲಿಯಲ್ಲಿರುವ ಇಡಿ ಕಚೇರಿ ಹೋಗಿದ್ದರು. ಆದ್ರೆ, ಇಂದು ಸಂಜೆ ವರೆಗೂ ಡಿಕೆಶಿ ಅವರನ್ನು ವಿಚಾರಣೆಗೊಳಪಡಿಸಿದ ಇಡಿ ಅಧಿಕಾರಿಗಳು, ರಾತ್ರಿ ಬಂಧನಕ್ಕೊಳಪಡಿಸಿದ್ದಾರೆ.

ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸದ ಡಿಕೆಶಿ.. ಮುಂದಿನ ಸ್ಟೆಪ್ ಏನು?

8.59 ಕೋಟಿ ರೂಪಾಯಿ ದಾಖಲೆ ಇಲ್ಲದ ಹಣ ಪತ್ತೆ ಸಂಬಂಧಪಟ್ಟಂತೆ ಇಡಿ ನೀಡಿದ್ದ ಸಮನ್ಸ್ ಮೇರೆಗೆ ಬೆಂಗಳೂರಿನಿಂದ ಖುದ್ದಾಗಿ ದೆಹಲಿಗೆ ತೆರಳಿದ್ದ ಡಿಕೆಶಿ, ಕಳೆದು 3 ದಿನಗಳಿಂದ ಇ.ಡಿ. ಕಚೇರಿಯಲ್ಲಿ  ವಿಚಾರಣೆ ಎದುರಿಸುತ್ತಿದ್ದರು.  

ಡಿಕೆಶಿಯನ್ನು ಬೆಚ್ಚಿಬೀಳಿಸಿದ ED ಅಧಿಕಾರಿಗಳ 2 ಪ್ರಶ್ನೆಗಳು!

ಗಣೇಶ ಚತುರ್ಥಿ ಸಹ ಡಿಕೆಶಿಗೆ ವಿನಾಯಿತಿ ನೀಡಿರಲಿಲ್ಲ. ಇದ್ರಿಂದ ಡಿಕೆಶಿ ಅಸಮಾಧಾನಗೊಂಡು ಕಣ್ಣೀರಿಟ್ಟಿದ್ದರು. ಆದರೆ  ಇಂದು 4ನೇ ದಿನ ಇ.ಡಿ.ಅಧಿಕಾರಿಗಳು ಡಿ.ಕೆ.ಶಿವಕುಮಾರ್​ ಅವರನ್ನು ವಿಚಾರಣಗೆ ಒಳಪಡಿಸಿ ಬಳಿಕ ಬಂಧಿಸಿದ್ದಾರೆ. ಡಿ.ಕೆ.ಶಿವಕುಮಾರ್​ ವಿಚಾರಣೆಗೆ ಸಹಕರಿಸಲಿಲ್ಲ. ಕೇಳಿದ ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಟ್ಟಲ್ಲವೆಂದು ಡಿಕೆಶಿಯನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.