ತೆಲಂಗಾಣ[ಡಿ.11]: ಕಾಂಗ್ರೆಸ್‌ ನ ಟ್ರಬಲ್ ಶೂಟರ್ ಎಂದೇ ಕರೆಸಿಕೊಳ್ಳುವ ಡಿಕೆ ಶಿವಕುಮಾರ್ ತೀವ್ರ ನಿರಾಸೆಯಾಗಿದೆ. ತೆಲಂಗಾಣದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದರೆ ಅಧಿಕಾರಕ್ಕೇರಲು ಪ್ಲ್ಯಾನ್ ರಚಿಸಿದ್ದ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಹಿನ್ನಡೆಯಾಗಿದೆ. ಚುನಾವಣೋತ್ತರ ಸಮೀಕ್ಷೆಗಳಂತೆ ತೆಲಂಗಾಣದಲ್ಲಿ ಕೆಸಿಆರ್ ನೇತೃತ್ವದ ಟಿಆರ್‌ಎಸ್ ಪಕ್ಷ ಉಳಿದೆಲ್ಲಾ ಪಕ್ಷಗಳನ್ನು ಕ್ಲೀನ್ ಸ್ವೈಪ್ ಮಾಡಿ ಸರಳ ಬಹುಮತ ಗಳಿಸಿದೆ.

ಹೌದು ತೆಲಂಗಾಣದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ, ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೇರುವ ಕನಸು ಕಂಡಿತ್ತು. ಇದಕ್ಕಾಗಿ ಕರ್ನಾಟಕದಲ್ಲಿ ಮಾಡಿ್ದಂತೆಯೇ ತೆಲಂಗಾಣದಲ್ಲಿ ಶಾಸಕರನ್ನು ಸೆಳೆಯುವ ಪ್ಲ್ಯಾನ್ ಮಾಡಲಾಗಿತ್ತು. ಇಲ್ಲಿನ ಶಾಸಕರನ್ನು ಸೆಳೆಯುವ ಹಾಗೂ ಬೆಂಗಳೂರಿಗೆ ಶಿಫ್ಟ್ ಮಾಡುವ ಜವಾಬ್ದಾರಿಯನ್ನು ಡಿಕೆಶಿಗೆ ವಹಿಸಲಾಗಿತ್ತು. 

ಓವೈಸಿಗೆ ಕಾಂಗ್ರೆಸ್ ಬೆಂಬಲ!: ರಿಸಲ್ಟ್‌ಗೂ ಮುನ್ನ ಹೈ ಡ್ರಾಮಾ

ಅಹ್ಮದ್ ಪಟೇಲ್ ಸೂಚನೆ ಮೇರೆಗೆ ಖಾಡಕ್ಕಿಳಿದಿದ್ದ ಡಿಕೆಶಿ ಟಿಆರ್ ಎಸ್ ಪಕ್ಷ ಸೋಲಿಸಲು ರಣತಂತ್ರ ಹೆಣೆದಿದ್ದರು. ಇದಕ್ಕಾಗಿ ಪಕ್ಷೇತರ ಸೇರಿದಂತೆ ಟಿಆರ್‌ಎಸ್ ಪಕ್ಷದ ಶಾಸಕರನ್ನೂ ಸಂಪರ್ಕಿಸಿದ್ದರು. ಆದರೀಗ ಈ ಎಲ್ಲಾ ಯೋಜನೆಗಳು ತಲೆಕೆಳಗಾಗಿದ್ದು, ತೆಲಂಗಾಣದಲ್ಲಿ ಕೆಸಿ ಆರ್ ನೇತೃತ್ವದ ಪಕ್ಷ ಭರ್ಜರಿ ಜಯ ಗಳಿಸಿದೆ. ಈ ಮೂಲಕ ಕರ್ನಾಟಕದಲ್ಲಿ ಮಾಡಿದಂತೆ ಸೇಮ್ ಟು ಸೇಮ್ ಪ್ಲ್ಯಾನ್ ತೆಂಗಾಣದಲ್ಲೂ ಮಾಡಲು ಹೋದ ಕಾಂಗ್ರೆಸ್ ಟ್ರಬಲ್ ಶೂಟರ್ ಗೆ ಭಾರೀ ವೈಫಲ್ಯ ಕಂಡಿದ್ದಾರೆ.