ಬೆಂಗಳೂರು (ಜ. 08): ಕಳೆದ ವಾರ ಮೇಕೆದಾಟು ಕುರಿತಂತೆ ಸಂಸತ್‌ ಆವರಣದಲ್ಲಿ ರಾಜ್ಯದ ಸರ್ವ ಪಕ್ಷಗಳ ಸಂಸದರು ಪ್ರತಿಭಟನೆ ನಡೆಸಿದಾಗ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಕೂಡ ಅಲ್ಲಿ ಬಂದು ನಿಂತಿದ್ದರು.

ಲೋಕಸಭಾ ಚುನಾವಣೆ: ದೇವೇಗೌಡರು ಹಾಸನ ಬಿಟ್ಟು ಮೈಸೂರಲ್ಲಿ ನಿಲ್ತಾರಾ?

ಸಂಸತ್ತಿನ ನಿಯಮದಂತೆ ಸಂಸದರು ಮಾತ್ರ ಆವರಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಬಹುದು. ಉಳಿದವರು ಹೊರಗೆ ಹೋಗಿ ಮಾತನಾಡಬೇಕು. ಜೊತೆಗೆ ಮಂತ್ರಿ ಆದವರು ಸ್ವತಃ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತಿಲ್ಲ. ಆದರೆ ಎಲ್ಲ ನಿಯಮ ಮುರಿದ ಡಿ.ಕೆ. ಶಿವಕುಮಾರ್‌ ಉತ್ಸಾಹದಿಂದ ತಾವೇ ಪ್ರತಿಭಟನೆಗೆ ಬಂದು ಮೀಡಿಯಾ ಜೊತೆಗೂ ಮಾತನಾಡುತ್ತಿದ್ದರು. ಇದರಿಂದ ಕೆಲ ಕಾಲ ಇರಿಸುಮುರುಸಿನ ಸ್ಥಿತಿ ನಿರ್ಮಾಣವಾಗಿತ್ತು.

ಯುಪಿ ಮಿತ್ರರಿಂದಲೇ ರಾಹುಲ್ ಗಾಂಧಿಗೆ ಗೇಟ್‌ಪಾಸ್!

-ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್ ಕ್ಲಿಕ್ ಮಾಡಿ