ನವದೆಹಲಿ[ಅ.10]: ದೀಪಾವಳಿ ಹಬ್ಬದ ಮುನ್ನಾ ದಿನಗಳಲ್ಲಿ ಕೇಂದ್ರ ಸರ್ಕಾರ ತನ್ನ ನೌಕರರಿಗೆ ಭರ್ಜರಿ ಉಡುಗೊರೆ ಪ್ರಕಟಿಸಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ಇಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ತುಟ್ಟಿ ಭತ್ಯೆಯನ್ನು ದಾಖಲೆಯ ಶೇ.5ರಷ್ಟುಹೆಚ್ಚಿಸುವ ನಿರ್ಧಾರ ಕೈಗೊಂಡಿದೆ. ಇಷ್ಟು ಪ್ರಮಾಣದಲ್ಲಿ ತುಟ್ಟಿ ಭತ್ಯೆ ಹೆಚ್ಚಳ ಇದೇ ಮೊದಲು. ನಿರೀಕ್ಷೆಗಿಂತಲೂ ಹೆಚ್ಚಿನ ಪ್ರಮಾಣದ ಉಡುಗೊರೆ ಪ್ರಕಟಿಸಿದ ಕೇಂದ್ರದ ನಿರ್ಧಾರ ಸಹಜವಾಗಿಯೇ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

48 ಸಾವಿರ ಸಾರಿಗೆ ನೌಕರರನ್ನು ವಜಾಗೊಳಿಸಿದ ತೆಲಂಗಾಣ ಸಿಎಂ!

ಹಾಲಿ ಕೇಂದ್ರದ ನೌಕರರಿಗೆ ಮೂಲ ವೇತನ/ಪಿಂಚಣಿಯ ಶೇ.12ರಷ್ಟುತುಟ್ಟಿಭತ್ಯೆ ನೀಡಲಾಗುತ್ತಿದ್ದು, ಇನ್ನು ಮುಂದೆ ಶೇ.17ರಷ್ಟುತುಟ್ಟಿಭತ್ಯೆದೊರಕಲಿದೆ. ಇದು 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಹಾಗೂ 65 ಲಕ್ಷ ಪಿಂಚಣಿದಾರರಿಗೆ ಭರ್ಜರಿ ಲಾಭ ಮಾಡಿಕೊಡಲಿದೆ. ಸರ್ಕಾರಕ್ಕೆ ಈ ನಿರ್ಧಾರದಿಂದ 16 ಸಾವಿರ ಕೋಟಿ ರು. ಹೆಚ್ಚುವರಿ ಹೊರೆ ಬೀಳಲಿದೆ. ಹೆಚ್ಚಿರುವ ಹಣದುಬ್ಬರದ ಹೊರೆಯನ್ನು ಕಡಿಮೆ ಮಾಡಲು ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ ಎಂದು ಸಂಪುಟ ಸಭೆ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್‌ ಜಾವಡೇಕರ್‌ ಹೇಳಿದರು.

3 ದಿನ ಆಯ್ತು ಬಂಗಾರದ ಬೆಲೆ ಇಳಿದು: ಖರೀದಿ ಮಾಡಲ್ವಾ ತಿಳಿದೂ ತಿಳಿದು!

‘ಒಂದೇ ಬಾರಿಗೆ ಇಷ್ಟೊಂದು ತುಟ್ಟಿಭತ್ಯೆ ಹೆಚ್ಚಳ ಹಿಂದೆಂದೂ ಆಗಿರಲಿಲ್ಲ. ಇದು ದೀಪಾವಳಿಗೂ ಮುನ್ನ ನೌಕರರಿಗೆ ಸಂತಸ ಮೂಡಿಸಲಿದೆ’ ಎಂದು ಸಚಿವರು ನುಡಿದರು. ಈ ಹಿಂದೆ 2019ರ ಜನವರಿ ತಿಂಗಳಲ್ಲಿ ತುಟ್ಟಿಭತ್ಯೆಯನ್ನು ಶೇ.3ರಷ್ಟುಹೆಚ್ಚಿಸುವ ಮೂಲಕ ಶೇ.12ಕ್ಕೆ ತಲುಪಿಸಲಾಗಿತ್ತು.