ಹಾವೇರಿ ಕಾಂಗ್ರೆಸ್​ನಲ್ಲಿ  ಭಿನ್ನಮತವಿರುವುದು ಮತ್ತೊಮ್ಮೆ ಸಾಬೀತಾಗಿದೆ. ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್​ ಭೇಟಿ ನೀಡಿದ ವೇಳೆಯೇ ಕ್ಷುಲ್ಲಕ ಕಾರಣಕ್ಕಾಗಿ ಕಾಂಗ್ರೆಸ್​​ ಮುಖಂಡರಿಬ್ಬರು ಕಚ್ಚಾಡಿಕೊಂಡಿದ್ದಾರೆ.

ಹಾವೇರಿ(ಸೆ.02): ಹಾವೇರಿ ಕಾಂಗ್ರೆಸ್​ನಲ್ಲಿ ಭಿನ್ನಮತವಿರುವುದು ಮತ್ತೊಮ್ಮೆ ಸಾಬೀತಾಗಿದೆ. ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್​ ಭೇಟಿ ನೀಡಿದ ವೇಳೆಯೇ ಕ್ಷುಲ್ಲಕ ಕಾರಣಕ್ಕಾಗಿ ಕಾಂಗ್ರೆಸ್​​ ಮುಖಂಡರಿಬ್ಬರು ಕಚ್ಚಾಡಿಕೊಂಡಿದ್ದಾರೆ.

ಎರಡು ದಿನದ ಹಿಂದೆ ಪರಮೇಶ್ವರ್​ ನೇತೃತ್ವದಲ್ಲಿ ಬೂತ್​ ಮಟ್ಟದ ಕಾರ್ಯಕರ್ತರ ಸಭೆ ನಡೆದಿತ್ತು. ಸಭೆಯ ನಂತ್ರ ಇಲ್ಲಿನ ಶಿವಶಕ್ತಿ ಪ್ಯಾಲೇಸ್​​ನಲ್ಲಿ MSIL ನಿರ್ದೇಶಕ ಮಂಜುನಾಥ್​ ಮಠಪತಿ ಹಾಗೂ ಮತ್ತೊರ್ವ ಕಾಂಗ್ರೆಸ್​ ಮುಖಂಡ, ಪ್ರಕಾಶ್​ ಜೈನ್​ ನಡುವೆ ಕೊಠಡಿಯ ಸಲುವಾಗಿ ಮಾತಿನ ಚಕಮಕಿ ನಡೆದಿದೆ.

ಗಲಾಟೆ ಕೊನೆಗೆ ಕೈ ಕೈ ಮಿಲಾಯಿಸುವ ಹಂತ ತಲುಪಿದ್ದು, ಅಲ್ಲೇ ಇದ್ದ ಇನ್ನುಳಿದ ಕಾರ್ಯಕರ್ತರು ಮದ್ಯಸ್ಥಿಕೆ ವಹಿಸಿ ಸಮಾಧಾನಪಡಿಸಿದ್ದಾರೆ.