ನವದೆಹಲಿ (ಅ.27): ಅಂಗವಿಕಲರು ಹಾಗೂ 80 ವರ್ಷ ದಾಟಿದ ವೃದ್ಧರಿಗೆ ಅಂಚೆ ಮತಕ್ಕೆ ಅವಕಾಶ ನೀಡುವ ಮಹತ್ವದ ತೀರ್ಮಾನವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ.

ಈ ಬಗ್ಗೆ ಚುನಾವಣಾ ಆಯೋಗ ಮಾಡಿದ ಶಿಫಾರಸಿನ ಮೇರೆಗೆ ಕೇಂದ್ರ ಕಾನೂನು ಹಾಗೂ ನ್ಯಾಯಿಕ ಸಚಿವಾಲಯ ಚುನಾವಣಾ ನಿಯಮ-1961ಕ್ಕೆ ಅಕ್ಟೋಬರ್‌ 22ರಂದು ತಿದ್ದುಪಡಿ ಮಾಡಿದ್ದು, ಇದರಲ್ಲಿ ವೃದ್ಧರು ಹಾಗೂ ಅಂಗವಿಕಲರನ್ನು ‘ಗೈರು ಮತದಾರರ ಪಟ್ಟಿ’ಯಲ್ಲಿ ಸೇರಿಸಿದೆ.

ಅಯೋಧ್ಯೆಯಲ್ಲಿ 5.4 ಲಕ್ಷ ದೀಪ ಹಚ್ಚಿ ಗಿನ್ನೆಸ್ ದಾಖಲೆ

‘ಗೈರು ಮತದಾರರ ಪಟ್ಟಿ’ಯಲ್ಲಿ ಇರುವವರು ಅಂಚೆ ಮತದ ಮೂಲಕ ಮತ ಚಲಾಯಿಸಬಹುದಾಗಿದೆ. ಇದಕ್ಕಾಗಿ ಚುನಾವಣಾ ಆಯೋಗದ ‘13ಎ’ ಅರ್ಜಿಯನ್ನು ಪಡೆದುಕೊಂಡು ಭರ್ತಿ ಮಾಡಿ ಅಂಚೆ ಮತ ರವಾನಿಸಬಹುದು. ಈವರೆಗೆ ಸಶಸ್ತ್ರ ಪಡೆಗಳು ಹಾಗೂ ಚುನಾವಣಾ ಕರ್ತವ್ಯದ ಮೇಲೆ ನಿಯೋಜಿಸಲ್ಪಟ್ಟವರಿಗೆ ಮಾತ್ರ ಅಂಚೆ ಮತಕ್ಕೆ ಅವಕಾಶವಿತ್ತು.

‘ಅಂಗವಿಕಲರು ಹಾಗೂ ವಯೋವೃದ್ಧರಿಗೆ ಮತಗಟ್ಟೆತಲುಪಿ ಮತ ಹಾಕುವುದು ಕಷ್ಟವಾಗುತ್ತಿತ್ತು. ಹೀಗಾಗಿ ಅವರಿಗೆ ಅಂಚೆ ಮತಕ್ಕೆ ಅನುವು ಮಾಡಿದ್ದೇವೆ. ಇದರಿಂದ ಮತದಾನ ಪ್ರಮಾಣ ಹೆಚ್ಚಾಗುವ ವಿಶ್ವಾಸವಿದೆ’ ಎಂದಿದ್ದಾರೆ.