ಮೋದಿ – ಶಾ ಬಗ್ಗೆ ರೋಸಿ ಹೋಗಿದ್ದಾರೆ ಜನ : ದಿನೇಶ್ ಗುಂಡೂರಾವ್

First Published 15, Mar 2018, 2:17 PM IST
Dinesh Gundu Rao Slams BJP Leaders
Highlights

ಉತ್ತರ ಪ್ರದೇಶ ಮತ್ತು  ಬಿಹಾರ ಉಪ ಚುನಾವಣೆಯಲ್ಲಿ ಬಿಜೆಪಿಗೆ ಮುಖಭಂಗವಾಗಿದೆ. ದೇಶದಲ್ಲಿ ಜನ ಬಿಜೆಪಿ ವಿರುದ್ಧ ತಿರುಗಿ  ಬಿದ್ದಿದ್ದಾರೆ. ಮೋದಿ ಭಾಷಣ ಕೇಳೀ ಜನ ರೋಸಿ ಹೋಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ತುಮಕೂರಿನಲ್ಲಿ ವಾಗ್ದಾಳಿ ನಡೆಸಿದ್ದಾರೆ.

ತುಮಕೂರು: ಉತ್ತರ ಪ್ರದೇಶ ಮತ್ತು  ಬಿಹಾರ ಉಪ ಚುನಾವಣೆಯಲ್ಲಿ ಬಿಜೆಪಿಗೆ ಮುಖಭಂಗವಾಗಿದೆ. ದೇಶದಲ್ಲಿ ಜನ ಬಿಜೆಪಿ ವಿರುದ್ಧ ತಿರುಗಿ  ಬಿದ್ದಿದ್ದಾರೆ. ಮೋದಿ ಭಾಷಣ ಕೇಳೀ ಜನ ರೋಸಿ ಹೋಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ತುಮಕೂರಿನಲ್ಲಿ ವಾಗ್ದಾಳಿ ನಡೆಸಿದ್ದಾರೆ.

2017-18ರಲ್ಲಿ 10ಕ್ಕೂ ಹೆಚ್ಚು ಉಪ ಚುನಾವಣೆಯಲ್ಲಿ ಬಿಜೆಪಿಗೆ ಸೋಲು ಖಚಿತವಾಗಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ  ಯೋಗಿ ಆದಿತ್ಯನಾಥ್ ಕರ್ನಾಟಕಕ್ಕೆ ಬಂದು ಧ್ವೇಷದ ರಾಜಕಾರಣ ಮಾಡುವುದನ್ನು ನಿಲ್ಲಿಸಬೇಕು. ಅಮಿತ್ ಶಾ,  ಮೋದಿ  ಪ್ರಚೋದನಾ ಕಾರಿ ಭಾಷಣವನ್ನು, ಸುಳ್ಳಿನ ಆರೋಪ ಮಾಡುವುದನ್ನು ಮೊದಲು ನಿಲ್ಲಿಸಬೇಕು. ಕರ್ನಾಟಕದಲ್ಲಿ ಬಂದು ಮುಖ ತೋರಿಸಲು ನಿಮಗೆ ಯಾವುದೇ ರೀತಿಯಾದ ನೈತಿಕತೆ ಇಲ್ಲ ಎಂದು ಕಿಡಿಕಾರಿದ್ದಾರೆ.

ಅಲ್ಲದೇ  ಇವಿಎಂ ಮಷಿನ್ ಬಗ್ಗೆ ಅಸಮಾಧಾನ ಹೊರ ಹಾಕಿದ ಅವರು  ತಾಂತ್ರಿಕ ದೋಷ ಆಗದಂತೆ ಎಚ್ಚರ ವಹಿಸಬೇಕೆನ್ನುವುದು ನಮ್ಮ ಆಗ್ರಹ ಎಂದಿದ್ದಾರೆ. ಇನ್ನು ರಾಜ್ಯದಲ್ಲಿ ನಡೆಯುತ್ತಿರುವ ಕೋಮು ಗಲಭೆಗೆ ಬಿಜೆಪಿ ಮುಖಂಡರೇ ಕಾರಣರಾಗಿದ್ದಾರೆ.  ಅನಂತ್ ಕುಮಾರ್ ಹೆಗಡೆ, ಶೋಭಾ ಕರಂದ್ಲಾಜೆ, ಅಮಿತ್ ಶಾ, ಹಿಂದುತ್ವದ  ಅಜೆಂಡಾದ ಮೇಲೆ ಕೋಮು ಗಲಭೆಯನ್ನು ಸೃಷ್ಟಿ ಮಾಡುತ್ತಿದ್ದಾರೆ ಎಂದಿದ್ದಾರೆ.

ಇನ್ನು ಇದೇ ವೇಳೆ ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಮಾತನಾಡಿದ ಅವರು ನಮ್ಮ ಪಕ್ಷಕ್ಕೂ ಪ್ರತ್ಯೇಕ ಧರ್ಮಕ್ಕೂ ಸಂಬಂಧವಿಲ್ಲ ಎಂದು ಗುಂಡೂರಾವ್ ಹೇಳಿದ್ದಾರೆ.

loader