ದಿನ ಭವಿಷ್ಯ: ಧನಸ್ಸು ರಾಶಿಯವರಿಗೆ ಅಂದುಕೊಂಡ ಕಾರ್ಯ ಈಡೇರಲಿದೆ, ಉಳಿದವರ ಭವಿಷ್ಯ ಹೇಗಿರಲಿದೆ ಗೊತ್ತಾ..?

news | Saturday, January 20th, 2018
naveena -
Highlights

ಇಂದಿನ ರಾಶಿಫಲ ನಿಮ್ಮ ಮುಂದೆ...

ಶ್ರೀ ಹೇಮಲಂಬಿ ನಾಮ ಸಂವತ್ಸರ

ಉತ್ತರಾಯಣ

ಶಿಶಿರ ಋತು

ಮಾಘ ಮಾಸ

ಶಕ್ಲ ಪಕ್ಷ

ತೃತೀಯ ತಿಥಿ

ಶತಭಿಷ ನಕ್ಷತ್ರ

ಶನಿವಾರ

ಮೇಷ ರಾಶಿ : ಗುರುವಿನ ಅನುಕೂಲ ದೊರೆಯಲಿದೆ, ದೈಹಿಕ ಸಾಮರ್ಥ್ಯ ಹೆಚ್ಚಲಿದೆ, ಸುಬ್ರಹ್ಮಣ್ಯ ಗಾಯತ್ರಿ ಪಠಿಸಿ

ವೃಷಭ : ರಾಶಿಯ ಅಧಿಪತಿಯು  ರವಿ ಕೇತುಗಳ ಜೊತೆ ಇರುವುದರಿಂದ ಸ್ತ್ರೀಯರಿಂದ ತೊಂದರೆ, ದ್ರವ್ಯ ನಾಶ,

ಮಿಥುನ : ರಾಶ್ಯಾಧಿಪತಿ ಬಾಧಾಸ್ಥಾನದಲ್ಲಿರುವುದರಿಂದ ದು:ಖ ವಾರ್ತೆಗಳನ್ನು ಕೇಳಲಿದ್ದೀರಿ. ಸಾಮಾನ್ಯದಿನ, ಹೆಸರುಕಾಳು ದಾನ ಮಾಡಿ

ಕಟಕ : ಅಕ್ಕಪಕ್ಕದವರೊಂದಿಗೆ ಕಲಹ, ಆರೋಗ್ಯ ಹಾನಿ, ಜಲದುರ್ಗೆಯ ದರ್ಶನ ಮಾಡಿ

ಸಿಂಹ : ರಾಶ್ಯಾಧಿಪತಿ ಸಪ್ತಮದಲ್ಲಿರುವುದರಿಂದ ಪ್ರಯಾಣದ ದಿನ, ಅನಾರೋಗ್ಯ, ಆದಿತ್ಯ ಹೃದಯಪಾರಾಯಣ ಮಾಡಿ

ಕನ್ಯಾ : ರಾಶ್ಯಾಧಿಪತಿಯಾದ ಬುಧ ಚತುರ್ಥದಲ್ಲಿ ಶತ್ರು ಮನೆಯಲ್ಲಿದ್ದುದರಿಂದ ಬಂಧು ಕಲಹ, ಮನ:ಕ್ಲೇಶ, ತಾಯಿ ಅನಾರೋಗ್ಯ, ಅನ್ನಪೂರ್ಣೇಶ್ವರಿ ದರ್ಶನ ಮಾಡಿ

ತುಲಾ : ರಾಶ್ಯಾಧಿಪತಿ ಚತುರ್ಥದಲ್ಲಿದ್ದುದರಿಂದ ಬಂಧು ಸೌಖ್ಯ, ಸ್ತ್ರೀ ಸೌಖ್ಯ, ಸ್ತ್ರೀಯರಿಂದ ಪ್ರಶಂಸೆ, ಲಲಿತಾ ಸಹಸ್ರನಾಮ ಪಠಿಸಿ

ವೃಶ್ಚಿಕ : ಆತ್ಮಸ್ಥೈರ್ಯ, ಚೋರರ ಭಯ, ಸಹೋದರರಲ್ಲಿ ಮನಸ್ತಾಪ, ಸುಬ್ರಹ್ಮಣ್ಯನಿಗೆ ಅಭಿಷೇಕ ಮಾಡಿಸಿ

ಧನಸ್ಸು : ರಾಶ್ಯಾಧಿಪತಿ ಲಾಭದಲ್ಲಿರುವುದರಿಂದ ಜಯ, ಅಂದುಕೊಂಡ ಕಾರ್ಯ ಈಡೇರಲಿದೆ, ಧನಸ್ಥನದಲ್ಲಿನ ಕೇತುವಿನಿಂದ ಧನ ವ್ಯಯ

ಮಕರ : ಸಾಮಾನ್ಯದಿನ, ಬೇಸರದ ಸಂಗತಿ, ಹೆಚ್ಚು ಚಿಂತನೆ, ಆಲೋಚನೆ, ಶಿವನಿಗೆ ಅಭಿಷೇಕ ಮಾಡಿಸಿ

ಕುಂಭ : ಧನ ಪ್ರಾಪ್ತಿ, ಗುರುವಿನ ಅನುಗ್ರಹವಿದೆ, ಉತ್ತಮ ಚಿಂತನೆ, ಗುರು ಮಂತ್ರ, ಗುರು ಚರಿತ್ರೆ ಪಾರಾಯಣ ಮಾಡಿ

ಮೀನ : ಸಾಮಾನ್ಯ ದಿನವಾಗಿರಲಿದೆ, ವ್ಯಾಕುಲತೆ ಕಾಡಲಿದೆ,  ವಾಗ್ದೇವಿ ಮಂತ್ರೋಪಾಸನೆ ಮಾಡಿ

-------------------------

ಡಾ.ಗೋಪಾಲಕೃಷ್ಣ ಶರ್ಮ,ಜ್ಯೋತಿಷಿಗಳು

Comments 0
Add Comment

  Related Posts

  Kannada Film Shivanna News

  video | Wednesday, April 11th, 2018

  Actress Sri Reddy to go nude in public

  video | Saturday, April 7th, 2018

  Jayamahal Film 3 Minutes Review

  video | Friday, April 6th, 2018

  Anant Kumar Hegde Writes To High Command Over Ticket Distribution

  video | Thursday, April 12th, 2018
  naveena -