ಕಳೆದೆರಡು ದಿನಗಳಿಂದ ನಡೆಯುತ್ತಿರುವ ಪರಪ್ಪನ ಅಗ್ರಹಾರದ ಡಿಐಜಿ ಡಿ ರೂಪಾ, ಹಾಗೂ ಡಿಜಿಪಿ ಎಚ್.ಎನ್ ಸತ್ಯನಾರಾಯಣ್ ರಾವ್ ನಡುವಿನ ಕಿತ್ತಾಟಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಇನ್ನಷ್ಟು ತುಪ್ಪ ಸುರಿದಿದ್ದಾರೆ.
ಬೆಂಗಳೂರು (ಜು.14): ಕಳೆದೆರಡು ದಿನಗಳಿಂದ ನಡೆಯುತ್ತಿರುವ ಪರಪ್ಪನ ಅಗ್ರಹಾರದ ಡಿಐಜಿ ಡಿ ರೂಪಾ, ಹಾಗೂ ಡಿಜಿಪಿ ಎಚ್.ಎನ್ ಸತ್ಯನಾರಾಯಣ್ ರಾವ್ ನಡುವಿನ ಕಿತ್ತಾಟಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಇನ್ನಷ್ಟು ತುಪ್ಪ ಸುರಿದಿದ್ದಾರೆ.
ಡಿಐಜಿ ಡಿ ರೂಪಾ, ಹಾಗೂ ಡಿಜಿಪಿ ಎಚ್.ಎನ್ ಸತ್ಯನಾರಾಯಣ್ ರಾವ್ ಎರಡು ದಿನಗಳಿಂದ ಕಿತ್ತಾಡುತ್ತಿದ್ದಾರೆ. ಪರಪ್ಪನ ಅಗ್ರಹಾರದಲ್ಲಿ ಭಾರೀ ಪ್ರಮಾಣದಲ್ಲಿ ಅವ್ಯವಹಾರಗಳು ನಡೆದಿವೆ ಎಂದು ರೂಪಾ ಪೊಲೀಸ್ ಮಹಾ ನಿರ್ದೇಶಕ ಆರ್.ಕೆ ದತ್ತಾರಿಗೆ ವರದಿಯನ್ನು ನೀಡಿದ್ದಾರೆ. ಶಶಿಕಲಾರಿಂದ ಸತ್ಯನಾರಾಯಣ್ ರಾವ್ ರೂ.2 ಕೋಟಿ ಲಂಚವನ್ನು ಪಡೆದಿದ್ದಾರೆ ಎಂದು ಆರೋಪಿಸಿದ್ದರು. ಸತ್ಯನಾರಾಯಣ್ ರಾವ್ ಮೇಲೆ ರೂಪಾ ಪ್ರತಿಕಾರ ತೆಗೆದುಕೊಳ್ಳುವುದಕ್ಕೆ ವರದಿಯನ್ನು ತಯಾರಿಸಿದ್ದರು ಎಂದು ಎಚ್ಡಿಕೆ ಹೇಳಿದ್ದಾರೆ.
ಸತ್ಯನಾರಾಯಣ್ ರಾವ್ ಡಿಜಿಪಿಯಾಗಿ ಅಧಿಕಾರ ಸ್ವೀಕರಿಸಿದ ಮೇಲೆ ತಿಂಗಳ ಲಂಚವನ್ನು 75 ಲಕ್ಷದಿಂದ 1 ಕೋಟಿಗೆ ಹೆಚ್ಚಿಸಿಕೊಂಡಿದ್ದಾರೆ. ಇದರಲ್ಲಿ 25 ಲಕ್ಷವನ್ನು ಡಿಐಜಿಗೆ ನೀಡು ಸಾಧ್ಯತೆಯಿದೆ. ಅವರಿಗೆ ಪಾಲನ್ನು ಕೊಡುವ ಬದಲು ಅಷ್ಟು ಮೊತ್ತವನ್ನು ತಾವೇ ಇಟ್ಟುಕೊಳ್ಳಲು ಶುರು ಮಾಡಿದ್ದರಿಂದ ಅವರಿಬ್ಬರ ನಡುವೆ ಭಿನ್ನಾಭಿಪ್ರಾಯ ಬಂದಿದೆ. ಇಬ್ಬರು ದೊಡ್ಡ ಭ್ರಷ್ಟಾಚಾರಿಗಳು ಎಂದು ಕುಮಾರಸ್ವಾಮಿ ದೂರಿದ್ದಾರೆ.
ತಮ್ಮ ಆರೋಪಕ್ಕೆ ಪುರಕವಾದ ದಾಖಲೆಗಳನ್ನು ಕುಮಾರಸ್ವಾಮಿ ಒದಗಿಸಿಲ್ಲ. ಸಕಾರಾಗೃಹದ ಅಧಿಕಾರಿಗಳ ಜೊತೆ ಮಾಹಿತಿ ಕಲೆ ಹಾಕುತ್ತಿದ್ದೇನೆ ಎಂದಿದ್ದಾರೆ.
