ನಟ ಅಂಬರೀಶ್ ನಿಧನ ಹೊಂದಿದ ಬೆನ್ನಲ್ಲೇ ಅವರಿಗೆ ತಮ್ಮ ಸಾವಿನ ಸುಳಿವು ಮೊದಲೇ ಸಿಕ್ಕಿತ್ತಾ ಎಂಬ ಪ್ರಶ್ನೆಗಳು ಎದ್ದಿವೆ. ನಾಲ್ಕು ತಿಂಗಳ ಹಿಂದೆ ತನ್ನ ಮಗ ಅಭಿಯೊಂದಿಗೆ ಮಂಡ್ಯಕ್ಕೆ ತೆರಳಿ ಮಾಡಿದ್ದ ಕೆಲಸವೇ ಈ ಎಲ್ಲಾ ಅನುಮಾನಗಳಿಗೆ ಕಾರಣವಾಗಿದೆ

ಬೆಂಗಳೂರು[ನ.28]: ಕಲಿಯುಗದ ಕರ್ಣ ನಟ ಅಂಬರೀಶ್ ಇಹಲೋಕ ತ್ಯಜಿಸಿದ್ದಾರೆ. ಇವರ ಅಗಲುವಿಕೆ ಇಡೀ ಕರುನಾಡನ್ನೇ ಕಾಡುತ್ತಿದ್ದು, ಅಭಿಮಾನಿಗಳು ಮಂಡ್ಯದ ಗಂಡನ್ನು ನೆನೆದು ಇನ್ನೂ ಕಂಬನಿ ಮಿಡಿಯುತ್ತಿದ್ದಾರೆ. ಹೀಗಿರುವಾಗ ಅಂಬಿಗೆ ತಮ್ಮ ಸಾವಿನ ಸುಳಿವು ಈ ಮೊದಲೇ ಸಿಕ್ಕಿತ್ತಾ ಎಂಬ ಅನುಮಾನ ಕಾಡಲಾರಂಭಿಸಿದೆ. ಇದಕ್ಕೆ ಕಾರಣವಾಗಿದ್ದು, ನಾಲ್ಕು ತಿಂಗಳ ಹಿಂದೆ ಅವರು ತೆಗೆದುಕೊಂಡ ಹೆಜ್ಜೆ. ಅಷ್ಟಕ್ಕೂ ಅವರೇನು ಮಾಡಿದ್ದರು ಅಂತೀರಾ? ಇಲ್ಲಿದೆ ವಿವರ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ಓದಿ: ಅಂಬಿ ಅಂತ್ಯಕ್ರಿಯೆ: ಒಂದಾಗಲೇ ಇಲ್ಲ ಈ ಸ್ಯಾಂಡಲ್‌ವುಡ್ ಸ್ಟಾರ್ಸ್

ಜುಲೈ 21ರಂದು ಬೆಳಿಗ್ಗೆಯೇ ಮದ್ದೂರು ಸಬ್ ರಿಜಿಸ್ಟ್ರಾರ್ ಕಚೇರಿಗೆ ಪುತ್ರ ಅಭಿಷೇಕ್ ಜೊತೆಗೆ ತೆರಳಿದ್ದ ಅಂಬಿ ತನ್ನ ಹುಟ್ಟೂರು ಮಂಡ್ಯದ ದೊಡ್ಡ ಅರಸಿನಕೆರೆಯ ಏಳೂವರೆ ಎಕರೆ ಜಮೀನು ಸೇರಿದಂತೆ ತನ್ನೆಲ್ಲಾ ಆಸ್ತಿಯನ್ನು ಮಗನ ಹೆಸರಿಗೆ ವಿಲ್ ಮಾಡಿಸಿದ್ದರು. ಸಂಜೆ ವೇಳೆಗೆ ಕಾನೂನು ಪ್ರಕ್ರಿಯೆ ಮುಗಿಸಿದ್ದ ಅಂಬರೀಶ್ ತಮ್ಮ ಆಸ್ತಿಯನ್ನು ಅಧಿಕೃತವಾಗಿ ಅಭಿ ಹೆಸರಿಗೆ ನೋಂದಾಯಿಸಿದ ಬಳಿಕ ಬೆಂಗಳೂರಿಗೆ ಮರಳಿದ್ದರು.

ಇದನ್ನೂ ಓದಿ: ಕಂಠೀರವ ಸ್ಟುಡಿಯೋದಲ್ಲಿ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಅಭಿಮಾನಿಗಳ ವಿರೋಧ

ಅಂಬರೀಶ್ ಈ ನಡೆ ಗಮನಿಸಿದರೆ ಅವರಿಗೆ ತಮ್ಮ ಸಾವಿನ ಸುಳಿವು ಮೊದಲೇ ಸಿಕ್ಕಿತ್ತಾ ಎಂಬುವುದು ಕಾಡುವುದು ಸಹಜ. ಅದೇನಿದ್ದರೂ ಸದ್ಯ 'ಜಲೀಲ' ನಮ್ಮನ್ನಗಲಿದ್ದಾರೆ, ಆದರೆ ಅವರ ನೆನಪುಗಳು ಮಾತ್ರ ಅಜರಾಮರ.