ಧೋನಿ ಪತ್ನಿ ಸಾಕ್ಷಿಗೆ ಗನ್ ಬೇಕಂತೆ: ಕಾರಣ?

Dhoni's Wife Alleges Threat to Life, Applies For Arms License
Highlights

ಧೋನಿ ಪತ್ನಿ ಸಾಕ್ಷಿಗೆ ಬೇಕಂತೆ ಗನ್

ಜೀವ ಬೆದರಿಕೆ ಹಿನ್ನೆಲೆಯಲ್ಲಿ ಗನ್ ಗಾಗಿ ಮನವಿ

ರಾಂಚಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಸಾಕ್ಷಿ

ಪಿಸ್ತೂಲ್ ಅಥವಾ 0.32 ಬೋರ್ ರಿವಾಲ್ವರ್ ಬೇಕಂತೆ 

ರಾಂಚಿ(ಜೂ.20): ಜೀವ ಬೆದರಿಕೆ ಹಿನ್ನೆಲೆಯಲ್ಲಿ ಶಸ್ತ್ರಾಸ್ತ್ರ ಹೊಂದಲು ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಪತ್ನಿ ಸಾಕ್ಷಿ ಪರವಾನಗಿಗೆ ಅರ್ಜಿ ಸಲ್ಲಿಸಿದ್ದಾರೆ.

ಜಾರ್ಖಂಡ್ ರಾಜಧಾನಿ ರಾಂಚಿ ಅಧಿಕಾರಿಗಳಿಗೆ ಮನವಿ ಅರ್ಜಿ ಸಲ್ಲಿಸಿರುವ ಸಾಕ್ಷಿ, ಪಿಸ್ತೂಲ್ ಅಥವಾ 0.32 ಬೋರ್ ರಿವಾಲ್ವರ್ ಹೊಂದಲು ಲೈಸೆನ್ಸ್ ನೀಡುವಂತೆ ಮನವಿ ಮಾಡಿದ್ದಾರೆ. ಮನೆಯಲ್ಲಿ ಬಹುತೇಕ ಸಮಯ ತಾವು ಏಕಾಂಗಿಯಾಗಿಯೇ ಇರತ್ತಿದ್ದು, ಮಗಳ ರಕ್ಷಣೆಯೂ ತಮ್ಮ ಜವಾಬ್ದಾರಿ ಎಂದು ಸಾಕ್ಷಿ ಅರ್ಜಿಯಲ್ಲಿ ನಮೂದಿಸಿದ್ದಾರೆ. 2010ರಲ್ಲಿ ಎಂ.ಎಸ್.ಧೋನಿ 9ಎಂಎಂ ಪಿಸ್ತೂಲ್ ಪರವಾನಿಗೆ ಪಡೆದಿದ್ದಾರೆ.

ರಾಂಚಿಯ ಕೆಲವು ಪ್ರದೇಶಗಳಿಗೆ ವೈಯಕ್ತಿಕ ಕೆಲಸಗಳ ಹಿನ್ನೆಲೆಯಲ್ಲಿ ತಾವು ಏಕಾಂಗಿಯಾಗಿ ಹೋಗಬೇಕಾಗುತ್ತದೆ. ಅಲ್ಲದೇ ತಮ್ಮ ಜೀವಕ್ಕೆ ಬೆದರಿಕೆಯಿದ್ದು, ರಕ್ಷಣೆಗಾಗಿ ಗನ್ ಇಟ್ಟುಕೊಳ್ಳಲು ಅವಕಾಶ ನೀಡಬೇಕು ಸಾಕ್ಷಿ ಧೋನಿ ಅರ್ಜಿಯಲ್ಲಿ ನಮೂದಿಸಿದ್ದಾರೆ. 

loader