ಶಿವಮೊಗ್ಗ :  ಲೋಕಸಭಾ ಚುನಾವಣೆ ಮುಕ್ತಾಯವಾಗಿದೆ. ದೇಶದಲ್ಲಿ ಬಿಜೆಪಿ ತಿ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಬಿಜೆಪಿ ಗೆಲುವಿಗೆ ಮೋದಿ ಅಲೆ ಕಾರಣ ಎಂದು ಶಿವಮೊಗ್ಗ ಬಿಜೆಪಿ ಜಿಲ್ಲಾಧ್ಯಕ್ಷ ರುದ್ರೇಗೌಡ ಹೇಳಿದ್ದಾರೆ. 

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಹಣ ಹಂಚಿಕೆ, ಜಾತಿ ರಾಜಕಾರಣವನ್ನು ಜನ ತಿರಸ್ಕರಿಸಿದ್ದಾರೆ.  ಇದರಿಂದ ಬಿಜೆಪಿ ಅಭುತಪೂರ್ವ ಯಶಸ್ಸು ಸಾಧಿಸಿತು ಎಂದರು. 

ಇನ್ನು ಸಂಸದ ಬಿ.ವೈ ರಾಘವೇಂದ್ರ  ಭದ್ರಾವತಿ ವಿಐಎಸ್ ಎಲ್ ಕಾರ್ಖಾನೆಯ ಅಭಿವೃದ್ಧಿ ಮತ್ತು ಪುನಶ್ಚೇತನ ಮಾಡುವ ಚಿಂತನೆ ಹೊಂದಿದ್ದಾರೆ.  ಉಪ ಚುನಾವಣೆ ನಂತರ ಜಿಲ್ಲೆಗೆ ರೈಲ್ವೆ ಯೋಜನೆ ತಂದಿರುವುದು. ಜಿಲ್ಲೆಯ ಎಲ್ಲಾ ಶಾಸಕರು ಒಗ್ಗೂಡಿ ಕೆಲಸ ಮಾಡಿರುವುದು ಬಿಜೆಪಿ ಗೆಲುವಿಗೆ ಕಾರಣವಾಯಿತು. 

ಬಿ ವೈ ರಾಘವೇಂದ್ರ ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆಂದು ಚುನಾವಣಾ ಪ್ರಚಾರದ ಮೊದಲ ದಿನವೇ ಹೇಳಿದ್ದಾಗಿ ರುದ್ರೇಗೌಡ ಹೇಳಿದರು.