ಎಚ್.ಡಿ.ದೇವೇಗೌಡರು ಇಂದು ಲಂಡನ್‌ನ ಥೇಮ್ಸ್ ನದಿ ತೀರದಲ್ಲಿರುವ ಜಗಜ್ಯೋತಿ ಬಸವೇಶ್ವರ ಪ್ರತಿಮೆಗೆ ಗೌರವ ಸಲ್ಲಿಸಲಿದ್ದಾರೆ | ಇದಕ್ಕಾಗಿಯೇ ಲಂಡನ್‌ಗೆ ತೆರಳಿದ್ದಾರೆ ಗೌಡರು   

ಬೆಂಗಳೂರು (ಅ. 26): ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಶುಕ್ರವಾರ ಲಂಡನ್‌ನ ಥೇಮ್ಸ್ ನದಿ ತೀರದಲ್ಲಿರುವ ಜಗಜ್ಯೋತಿ ಬಸವೇಶ್ವರ ಪ್ರತಿಮೆಗೆ ಗೌರವ ಸಲ್ಲಿಸಲಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗುರುವಾರ ಬೆಂಗಳೂರಿನಿಂದ ಲಂಡನ್ನಿಗೆ ತೆರಳಿದ ಅವರನ್ನು ಅಲ್ಲಿನ ಲ್ಯಾಂಬೆತ್‌ನ ಮಾಜಿ ಮೇಯರ್ ಹಾಗೂ ಕನ್ನಡಿಗ ಡಾ.ನೀರಜ್ ಪಾಟೀಲ್ ಅವರು ಭೇಟಿ ಮಾಡಿ ಅಲ್ಲಿನ ಕನ್ನಡಿಗ ಒಕ್ಕೂಟಗಳ ಪರವಾಗಿ ಮತ್ತೊಮ್ಮೆ ಆಹ್ವಾನ ನೀಡಿದರು.

ಈ ಪ್ರತಿಮೆ ಸ್ಥಾಪನೆಯಾಗುವಲ್ಲಿ ನೀರಜ್ ಪಾಟೀಲ್ ಅವರ ಪಾತ್ರ ಪ್ರಮುಖವಾದದ್ದು. ಅವರ ಅವಿರತ ಪ್ರಯತ್ನದಿಂದಾಗಿಯೇ ಪ್ರತಿಮೆ ಸ್ಥಾಪನೆಗೊಂಡಿತ್ತು. ಹೀಗಾಗಿ, ದೇವೇಗೌಡರು ಶುಕ್ರವಾರ ಅಲ್ಲಿಗೆ ತೆರಳಿ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅಲ್ಲಿನ ಕನ್ನಡಿಗರೊಂದಿಗೆ ಕೆಲ ಕಾಲ ಸಮಾಲೋಚನೆಯನ್ನೂ ನಡೆಸಲಿದ್ದಾರೆ. ಗುರುವಾರ ಲಂಡನ್ನಿನಲ್ಲಿ ನಡೆದ ಜಾಗತಿಕ ಸಾಧಕರ ಸಮಾವೇಶದಲ್ಲಿ ದೇವೇಗೌಡರು ಪಾಲ್ಗೊಂಡಿದ್ದರು.