ಕಲಬುರಗಿ[ಸೆ.28]: ರಾಜಕಾರಣಿಗಳು ಪರಸ್ಪರ ವಾಗ್ದಾಳಿ ನಡೆಸುವುದು ಹೊಸದಲ್ಲ. ಸದ್ಯ ಈ ಪಟ್ಟಿಗೆ ಕಲಬುರಗಿ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತೆಯೊಬ್ಬರು ಸೇರ್ಪಡೆಗೊಂಡಿದ್ದಾರೆ. ಸೊಲ್ಲಾಪುರದ ಬಿಜೆಪಿ ಸಂಸದರೊಬ್ಬರ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಕಾಂಗ್ರೆಸ್ ಕಾರ್ಯಕರ್ತೆ ಅವಹೇಳನಕಾರಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಹೌದು ಕಲಬುರಗಿ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತೆ ರೇಣುಕಾ ಸಿಂಗೆ ತಮ್ಮ ಫೇಸ್‌ಬುಕ್ ಪೇಜ್ ನಲ್ಲಿ ಸೊಲ್ಲಾಪುರದ ಬಿಜೆಪಿ ಸಂಸದ ಡಾ. ಜಯಸಿದ್ದೇಶ್ವರ ಸ್ವಾಮೀಜಿ ಪೋಸ್ಟ್ ಮಾಡುತ್ತಾ ಕಿಡಿ ಕಾರಿದ್ದಾರೆ. 'ಕಳ್ಳ ಖದೀಮ ಸ್ವಾಮಿ, ಅಧಿಕಾರಕ್ಕಾಗಿ ಏನು ಹೇಳಲು ಹೇಸಲ್ಲ. ಇವರು ಎಸ್‌ಸಿ ಸರ್ಟಿಫಿಕೇಟ್ ಮೇಲೆ ಸ್ಪರ್ಧಿಸಿ ಗೆದ್ದವರು' ಎಂದು ಬರೆದಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತೆಯ ಈ ಪೋಸ್ಟ್ ಭಾರೀ ವೈರಲ್ ಆದ ಬೆನ್ನಲ್ಲೇ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಇಂತಹ ಟೀಕೆ ಸಲ್ಲದು, ಸ್ವಾಮೀಜಿ ವಿರುದ್ಧ ಅವಹೇಳನಕಾರಿ ನುಡಿಗಳನ್ನಾಡಿದ ಕಾರ್ಯಕರ್ತೆ ಕ್ಷಮೆ ಯಾಚಿಸಬೇಕು ಎಂದು ಬೆಂಬಲಿಗರು ಒತ್ತಾಯಿಸಿದ್ದಾರೆ.