ಶಿವಸೇನಾ ಸಂಸದನಿಂದ ಚಪ್ಪಲಿಯಿಂದ ಹೊಡೆಸಿಕೊಂಡ ಏರ್ ಇಂಡಿಯಾ ಸಿಬ್ಬಂದಿಯ ದೂರು ಆಧರಿಸಿ ದೆಹಲಿ ಪೊಲೀಸರು ರವೀಂದ್ರ ಗಾಯಕ್ ವಾಡ್ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.
ನವದೆಹಲಿ(ಮಾ.24): ಶಿವಸೇನಾ ಸಂಸದನಿಂದ ಚಪ್ಪಲಿಯಿಂದ ಹೊಡೆಸಿಕೊಂಡ ಏರ್ ಇಂಡಿಯಾ ಸಿಬ್ಬಂದಿಯ ದೂರು ಆಧರಿಸಿ ದೆಹಲಿ ಪೊಲೀಸರು ರವೀಂದ್ರ ಗಾಯಕ್ ವಾಡ್ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.
ರವೀಂದ್ರ ಗಾಯಕ್ ವಾಡ್ ವಿರುದ್ಧ ಐಪಿಸಿ ಸೆಕ್ಷನ್ 308 ಮತ್ತು 355 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಲಾಗಿದೆ. ದೆಹಲಿ ಕ್ರೈಮ್ ಬ್ರಾಂಚ್ ಪೊಲೀಸರಿಗೆ ವರ್ಗಾಯಿಸಲಾಗಿದೆ ಎಂದು ದೆಹಲಿ ಪೊಲೀಸ್ ವಕ್ತಾರ ದೀಪೇಂದ್ರ ಪಠಕ್ ಹೇಳಿದ್ದಾರೆ.
ಬ್ಯುಸಿನೆಸ್ ಕ್ಲಾಸ್ ಟಿಕೆಟ್ ಹೊಂದಿದ್ದರೂ ಸಹ ಎಕಾನಮಿ ಕ್ಲಾಸ್ ನಲ್ಲಿ ಪ್ರಯಾಣ ಮಾಡುವಂತೆ ಮಾಡಿದರು ಎಂದು ಆರೋಪಿಸಿ ಏರ್ ಇಂಡಿಯಾ ವಿರುದ್ಧ ಗಾಯಕ್ ವಾಡ್ ದೂರು ನೀಡಿದ್ದಾರೆ.
