ಬಸ್ಸಿನಲ್ಲಿ ಹುಡುಗಿ ಪಕ್ಕ ಕುಳಿತು ಹಸ್ತಮೈಥುನ ಮಾಡಿಕೊಂಡವನ ಬಗ್ಗೆ ಮಾಹಿತಿ ನೀಡಿದವರಿಗೆ 25 ಸಾವಿರ ಬಹುಮಾನ

Delhi Police offers bounty on man who allegedly masturbated next to a girl in bus
Highlights

ಹಸ್ತಮೈಥುನ ಮಾಡಿಕೊಂಡವನ ಬಗ್ಗೆ ಮಾಹಿತಿ ನೀಡಿದವರಿಗೆ 25 ಸಾವಿರ

ನವದೆಹಲಿ(ಫೆ.17): ಮಾನಗೆಟ್ಟ ಕಿರಾತಕನೊಬ್ಬ ಸಾರ್ವಜನಿಕವಾಗಿ ಹುಡುಗಿಯ ಪಕ್ಕ ಕುಳಿತು ಅಸಭ್ಯತನ ಪ್ರದರ್ಶಿಸಿದ ಘಟನೆ ದೆಹಲಿಯ ವಸಂತ್ ವಿಹಾರ್ ಪೊಲೀಸ್ ಸ್ಟೇಷನ್'ನಲ್ಲಿ ನಡೆದಿದೆ.

ಈತನ ಪತ್ತೆಗೆ ಬಲೆ ಬೀಸಿರುವ ಪೊಲೀಸರು ಭಾವಚಿತ್ರವನ್ನು ಪ್ರಕಟಿಸಿದ್ದು ಸಾರ್ವಜನಿಕರು ಯಾರಾದರೂ ಈ ಕೀಚಕನ ಬಗ್ಗೆ ಮಾಹಿತಿ ನೀಡಿದರೆ 25 ಸಾವಿರ ರೂ. ಬಹುಮಾನ ನೀಡಿವುದಾಗಿ ಘೋಷಿಸಿದ್ದಾರೆ.

ಫೆ.7ರಂದು ಬಸ್ಸಿನಲ್ಲಿ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬಳು ಪ್ರಯಾಣ ಮಾಡುತ್ತಿದ್ದಾಗ ಆಕೆಯ ಪಕ್ಕದಲ್ಲಿ ಕುಳಿತ್ತಿದ್ದಾನೆ. ವಾಹನವೂ ವಿಪರೀತ ಜನಸಂದಣಿಯಿತ್ತು. ಪಕ್ಕದಲ್ಲಿ ಕುಳಿತವನೆ ವಿದ್ಯಾರ್ಥಿನಿಯ ಕೈಕಾಲನ್ನು ಮುಟ್ಟುವುದರ ಜೊತೆ ಬಹಿರಂಗವಾಗಿಯೇ ಹಸ್ತಮೈಥುನ ಮಾಡಿಕೊಂಡಿದ್ದಾನೆ.

ಜೋರಾಗಿ ಆತನನ್ನು ನಿಂದಿಸಿದರೂ ಆತ ತಲೆ ಕೆಡಿಸಿಕೊಳ್ಳಲಿಲ್ಲ. ಬೇಕಿದ್ದರೆ ಕೆಳಗಿಳಿ ಎಂದು ವಿದ್ಯಾರ್ಥಿನಿಗೆ ವಾದಿಸಿದ್ದಾನೆ. ಅಕ್ಕಪಕ್ಕದಲ್ಲಿದ್ದವರ್ಯಾರು ಆತನನ್ನು ಪ್ರಶ್ನಿಸಿಲಿಲ್ಲ.  ಕೊಳಕನ ಶಪಿಸಿದ ವಿದ್ಯಾರ್ಥಿನಿ ಆತನ ಭಾವಚಿತ್ರವನ್ನು ತನ್ನ ಮೊಬೈಲ್ ಕ್ಯಾಮರಾದಲ್ಲಿ ದಾಖಲಿಸಿಕೊಂಡಿದ್ದಾಳೆ. ಅದನ್ನು ಸಾಮಾಜಿಕ ಮಾಧ್ಯಮಗಳಲ್ಲೂ ಕೂಡ ಪೋಸ್ಟ್ ಮಾಡಿದ್ದಾಳೆ. ದೂರನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

 

loader