ನವದೆಹಲಿ[ಆ.28]: ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಜನರ ಓಲೈಕೆ ಕಾರ್ಯಕ್ರಮ ಮುಂದುವರೆಸಿದ್ದಾರೆ.

ಮಹಿಳೆಯರಿಗೆ ಮೆಟ್ರೋ, ಬಸ್‌ನಲ್ಲಿ ಉಚಿತ ಪ್ರಯಾಣ, 200 ವ್ಯಾಟ್‌ವರೆಗೆ ಉಚಿತ ವಿದ್ಯುತ್‌ ಪೂರೈಕೆ ಯೋಜನೆ ಘೋಷಿಸಿದ್ದ ಕೇಜ್ರಿ, ಇದೀಗ ಮಹಾನಗರಿಯ ಜನರ ನೀರಿನ ಬಿಲ್‌ ಬಾಕಿಯನ್ನು ಮನ್ನಾ ಮಾಡಿರುವುದಾಗಿ ಘೋಷಿಸಿದ್ದಾರೆ.

ಚುನಾವಣೆ ಮೇಲೆ ಕಣ್ಣು: ಆಟೋ ಚಾಲಕರಿಗೆ ಸಿಎಂ ಭರ್ಜರಿ ಗಿಫ್ಟ್!

ದಿಲ್ಲಿಯಲ್ಲಿ ಮಾಸಿಕ 20000 ಲೀ.ವರೆಗೆ ಉಚಿತ ನೀರು ಪೂರೈಕೆ ಮಾಡಲಾಗುತ್ತಿದೆ. ಉಳಿದ ಬಳಕೆಗೆ ದರ ವಿಧಿಸಲಾಗುತ್ತದೆ. ಇದನ್ನು ಬಾಕಿ ಉಳಿಸಿಕೊಂಡವರಿಗೆ ಇದೀಗ ಬಾಕಿ ಮನ್ನಾ ಮಾಡಲಾಗಿದೆ.